ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2021-22ನೇ ಸಾಲಿನ ಸ್ನಾತಕೋತ್ತರ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 7 ಕೊನೆ ದಿನಾಂಕವಾಗಿದೆ.
ವಿಶ್ವವಿದ್ಯಾನಿಲಯದ ಆವರಣ, ವಿ.ವಿ.ಕಾಲೇಜು, ವಿ.ವಿ. ಸಂಧ್ಯಾ ಕಾಲೇಜು, ಹಂಪನ ಕಟ್ಟೆ ಫೀಲ್ಡ್ ಮಾರ್ಷಲ್, ಕೆ.ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಆಳುವಾರ ಹಾಗೂ ಮಂಗಳೂರು ವಿ.ವಿ. ಸಂಯೋಜಿತ ಕಾಲೇಜುಗಳು(ಸರ್ಕಾರಿ ಕೋಟಾ ಸೀಟುಗಳಿಗೆ) ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಕಟಣೆಯಲ್ಲಿ ಸೂಚಿಸಿರುವಂತೆ ಶುಲ್ಕ, ಅರ್ಜಿ ನಮೂನೆ ಸೇರಿದಂತೆ ಹೆಚ್ಚಿನ ವಿವಿರಗಳಿಗಾಗಿ ವಿಶ್ವ ವಿದ್ಯಾನಿಲಯದ www.mangloreuniversity.ac.in ge ಗೆ ಭೇಟಿ ನೀಡಬಹುದು.