ಉಡುಪಿ : ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ೧೪ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕರಾಟೆ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ. ಕರಾಟೆ, ಜುಡೋ, ಟೈಕ್ವಾಂಡೋಗಳಲ್ಲಿ ವಿಶೇಷ ಪರಿಣಿತಿ ಹೊಂದಿದ ಮಹಿಳಾ ತರಬೇತಿದಾರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಮಹಿಳಾ ತರಬೇತಿದಾರರ ಗರಿಷ್ಟ ವಯೋಮಿತಿ ೪೦ ವರ್ಷ ಆಗಿರಬೇಕು. ತರಬೇತಿದಾರರು ಕನಿಷ್ಟ ಬ್ಲ್ಯಾಕ್ ಬೆಲ್ಟ್ ಪಡೆದಿರಬೇಕು ಹಾಗೂ ಕರಾಟೆಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಮೊದಲ ಆದ್ಯತೆ.
ಮಹಿಳಾ ಕರಾಟೆ ತರಬೇತಿದಾರರಿಗೆ ಅರ್ಜಿ ಆಹ್ವಾನ
Subscribe
Login
0 Comments