ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಬ್ಯಾಂಕ್ ಗುಡ್ ನ್ಯೂಸ್ ನೀಡಿದ್ದು, ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಆಸಕ್ತ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಿದೆ. ಫೆಬ್ರವರಿ 17ರಂದು ನೋಟಿಫಿಕೇಶನ್ ಬಿಡುಗಡೆ ಮಾಡಿರೋ ಕರ್ನಾಟಕ ಬ್ಯಾಂಕ್ ಮಾರ್ಚ್ 8ರ ಒರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಚೀಪ್ ಫೈನಾನ್ಸಿಯಲ್ ಆಫೀಸರ್ ಹುದ್ದೆ ಖಾಲಿಯಿದ್ದು, ಹುದ್ದೆಗೆ ಅಭ್ಯರ್ಥಿ ಯಾವುದೇ ಮಾನ್ಯತೆಗೆ ಒಳಪಟ್ಟ ವಿ.ವಿ. ಇಂದ ವ್ಯಾಸಂಗ ಪೂರ್ಣಗೊಳಿಸಿರಬೇಕು ಎಂದು ನೇಮಕಾತಿ ಅಧಿಸೂಚನೆ ಹೊರಡಿಸಿದೆ. 15 ವರ್ಷ ಅನುಭವ ಹೊಂದಿದ ಹಾಗೂ 55 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮಾರ್ಚ್ 8ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.