Saturday, June 7, 2025

ಓಮಿಕ್ರಾನ್ ಸೋಂಕು ಹೆಚ್ಚಾದಂತೆಲ್ಲಾ ಅದು ದುಪ್ಪಟ್ಟಾಗಬಹುದು: ಡಬ್ಲ್ಯುಹೆಚ್ಒ ಎಚ್ಚರಿಕೆ

ಸ್ಟಾಕ್ಹೋಮ್: ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದೆ. ಇದು ಇನ್ನೂ ಅಪಾಯಕಾರಿ ರೂಪಾಂತರಿಗಳಿಗೆ ದಾರಿಮಾಡಿಕೊಡಬಹುದು ಎಂದು ಎಚ್ಚರಿಕೆ ನೀಡಿದೆ. 

ಓಮಿಕ್ರಾನ್ ರೂಪಾಂತರಿ ವೈರಾಣು ವೇಗವಾಗಿ ಹರಡುತ್ತಿದೆ. ಆದರೆ ಇದು ಮೊದಲಿಗಿಂತ ಕಡಿಮೆ ತೀವ್ರತೆಯನ್ನು ಹೊಂದಿದ್ದು, ಪ್ಯಾಂಡಮಿಕ್ ಸ್ಥಿತಿಯಿಂದ ಎಂಡೆಮಿಕ್ ಹಂತವನ್ನು ಕೊರೋನಾ ತಲುಪುತ್ತಿರಬಹುದು ಎನ್ನಲಾಗಿತ್ತಿದೆ. ಇದರಿಂದ ಜನಜೀವನ ಮೊದಲಿನಂತೆ ಆಗುವ ನಿರೀಕ್ಷೆ ಇದೆ.

ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ಒಮ್ಮೊಮ್ಮೆ ನಮ್ಮ ನಿರೀಕ್ಷೆಗೆ ವಿರುದ್ಧವಾಗಿಯೂ ಕೆಲಸ ಮಾಡಬಹುದು. ಓಮಿಕ್ರಾನ್ ಸೋಂಕು ಹೆಚ್ಚಾದಂತೆಲ್ಲಾ ಅದು ದುಪ್ಪಟ್ಟಾಗುತ್ತಾ ಹೋಗಿ, ಹೊಸ ರೂಪಾಂತರಿಗೆ ಕಾರಣವಾಗಬಹುದು. ಓಮಿಕ್ರಾನ್ ಡೆಲ್ಟಾಗಿಂತ ಸ್ವಲ್ಪ ಕಡಿಮೆ ಪರಿಣಾಮವನ್ನು ಹೊಂದಿದೆ. ಆದರೂ ಓಮಿಕ್ರಾನ್ ಅಪಾಯಕಾರಿಯಾಗಿದ್ದು, ಇದರಿಂದ ಸಾವು ಕೂಡ ಸಂಭವಿಸಬಹುದಾಗಿದೆ. ಹಾಗೆ ಓಮಿಕ್ರಾನ್ಪ್ ನಂತರ ಬರುವ ರೂಪಾಂತರಿ ಯಾವ ರೀತಿ ಸಮಸ್ಯೆ, ಸವಾಲುಗಳನ್ನು ನೀಡುತ್ತದೆ ಎಂಬುದು ಯಾರಿಗೆ ತಿಳಿದಿದೆ? ಎಎಫ್ ಪಿಗೆ ಗೆ ಡಬ್ಲ್ಯುಹೆಚ್ಒ ನ ಹಿರಿಯ ಅಧಿಕಾರಿ ಕ್ಯಾಥರೀನ್ ಸ್ಮಾಲ್ ವುಡ್ ನೀಡಿರುವ ಸಂದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಯುರೋಪ್ ನಲ್ಲಿ ಪ್ಯಾಂಡಮಿಕ್ ಆರಂಭವಾದಾಗಿನಿಂದಲೂ 100 ಮಿಲಿಯನ್ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. 2021 ರ ಕೊನೆಯ ವಾರ ಒಂದರಲ್ಲೇ 5 ಮಿಲಿಯನ್ ಗೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.  ನಾವು ಅತ್ಯಂತ ಅಪಾಯದ ಸ್ಥಿತಿಯಲ್ಲಿದ್ದೇವೆ. ಓಮಿಕ್ರಾನ್ ಸಂಖ್ಯೆ ಪಶ್ಚಿಮ ಯುರೋಪ್ ನಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಈ ಪ್ರಮಾಣ ಹೆಚ್ಚಾಗುತ್ತಾ ಹೋದ ಹಾಗೆ ಜನರು ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿ, ಸಾಯುವ ಮಟ್ಟಕ್ಕೂ ತಲುಪಬಹುದಾಗಿದೆ ಎಂದು ಕ್ಯಾಥರೀನ್ ಸ್ಮಾಲ್ ವುಡ್ ಎಚ್ಚರಿಕೆ ನೀಡಿದ್ದಾರೆ. 

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles