ಭಾನುವಾರ ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು 222 ರನ್ಗಳಿಂದ ಶ್ರೀಲಂಕಾವನ್ನು ಸೋಲಿಸಿ ಗೆಲುವನ್ನು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್ ಆರ್.ಅಶ್ವಿನ್ ಒಟ್ಟು 6 ವಿಕೆಟ್ ಪಡೆದು, ತಮ್ಮ 85 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಒಟ್ಟು 436 ವಿಕೆಟ್ ಪಡೆದಿದ್ದಾರೆ. ಇವರ 436 ವಿಕೆಟ್ಗಳಲ್ಲಿ ಅತೀ ಹೆಚ್ಚು ಬಾರಿ ಔಟ್ ಆದ ಕ್ರಿಕೇಟಿರ ಪಟ್ಟಿ ಹೀಗಿದೆ:
- ಮೊದಲ ಸ್ಥಾನ: ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ – 11 ಬಾರಿ ಔಟ್
- ಎರಡನೇ ಸ್ಥಾನ: ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ – 10 ಬಾರಿ ಔಟ್
- ಮೂರನೇ ಸ್ಥಾನ: ಇಂಗ್ಲೆಂಡ್ ಮಾಜಿ ನಾಯಕ ಅಲಿಸ್ಟರ್ ಕುಕ್ – 9 ಬಾರಿ ಔಟ್
- ನಾಲ್ಕನೇ ಸ್ಥಾನ: ನ್ಯೂಜಿಲೆಂಡ್ನ ಟಾಮ್ ಲಾಥಮ್ – 8 ಬಾರಿ ಔಟ್
- ಐದನೇ ಸ್ಥಾನ: ಆಸ್ಟ್ರೇಲಿಯಾದ ಎಡ್ ಕೋವನ್, ಇಂಗ್ಲೆಂಡ್ನ ಜೇಮ್ಸ್ ಅಂಡರ್ಸನ್ ಹಾಗೂ ಶ್ರೀಲಂಕಾದ ಲಹಿರು ತಿರಿಮಿನ್ನೆ – 7 ಬಾರಿ ಔಟ್
ಅಶ್ವಿನ್ 436 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 434 ವಿಕೆಟ್ ಪಡೆದಿದ್ದ ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದಾರೆ. ಅಶ್ವಿನ್ ಟೀಮ್ ಇಂಡಿಯಾ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದರೆ, ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ವಿಶ್ವದ ಬೌಲರುಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ್ದಾರೆ.