Saturday, June 7, 2025

ಹಾಫ್ ಹೆಲ್ಮೆಟ್ ನಿಷೇಧಿಸಿ: ನಿಮ್ಹಾನ್ಸ್‌ ನಿಂದ ಸರ್ಕಾರಕ್ಕೆ ಶಿಫಾರಸ್ಸು

ಬೆಂಗಳೂರು: ದಿನೇ ದಿನೇ ರಾಜಧಾನಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕಮೀಷನರ್ ಡಾ. ರವಿಕಾಂತೇಗೌಡ ನೇತೃತ್ವದ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಹೆಲ್ಮೆಟ್​ ಬಳಕೆ ಸೇರಿ ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ.

ಹಾಫ್ ಹೆಲ್ಮೆಟ್ ನಿಷೇಧ ಮಾಡುವಂತೆ ಸರ್ಕಾರಕ್ಕೆ ನಿಮ್ಹಾನ್ಸ್‌ ಶಿಫಾರಸ್ಸು ಮಾಡಿದೆ. ನಿಮ್ಹಾನ್ಸ್‌ ಮತ್ತು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಜಂಟಿಯಾಗಿ 1 ಲಕ್ಷ ಬೈಕ್ ಸವಾರರ ಸಮೀಕ್ಷೆ ಮಾಡಿದ್ದಾರೆ. ಈ ಸಮೀಕ್ಷೆಯಿಂದ ಕಳೆದ ಒಂದು ವಾರದಲ್ಲಿ 15 ಪ್ರಮುಖ ಏರಿಯಾಗಳಲ್ಲಿ ಹಾಫ್ ಹೆಲ್ಮೆಟ್ ಅನ್ನು ಶೇಕಡ 26 ರಷ್ಟು ಜನರು ಬಳಕೆ ಮಾಡುತ್ತಿದ್ದಾರೆ. ಅಪಘಾತದಿಂದ ತಲೆಗೆ ಪೆಟ್ಟಾಗುತ್ತಿರುವವರ ಸಂಖ್ಯೆ ಹೆಚ್ಚಳಕ್ಕೆ ಈ ಹಾಫ್ ಹೆಲ್ಮೆಟ್ ಪ್ರಮುಖ ಕಾರಣ. ಬೈಕ್ ನ ಹಿಂಬದಿ ಕುಳಿತುಕೊಳ್ಳುವವರಲ್ಲಿ ಶೇಕಡ 70 ರಷ್ಟು ಜನರು ಮಾತ್ರ ‌ಹೆಲ್ಮೆಟ್ ಧರಿಸುತ್ತಾರೆ ಎಂದು ಸಮೀಕ್ಷೆ ಇಂದ ತಿಳಿದುಬಂದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles