ಬಂಟ್ವಾಳ: ಪುರಾತನ ಪ್ರಸಿದ್ಧ ಕಾರಿಂಜ ಕ್ಷೇತ್ರ ಮಹತೋಭಾರ ಪಾರ್ವತೀ-ಶಿವಾಲಯದ ಜಾತ್ರಾ ಮಹೋತ್ಸವ ಮತ್ತು ಮಹಾಶಿವರಾತ್ರಿಯು ಫೆ. 27ರಿಂದ ಮಾ.5ರವರೆಗೆ ನಡೆಯಲಿದೆ.
- ಫೆ.27: ಸಂಜೆ ಹೊರೆಕಾಣಿಕೆ ಮೆರವಣಿಗೆ.
- ಫೆ.28: ಬೆಳಗ್ಗೆ 8ಕ್ಕೆ ಗಣಯಾಗ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ನಿತ್ಯಉತ್ಸವ.
- ಮಾ.1ರಂದು ಮಹಾಶಿವರಾತ್ರಿ ಉತ್ಸವ, ತುಲಾಭಾರ ಸೇವೆ, ಯಕ್ಷಗಾನ ತಾಳಮದ್ದಳೆ, ಶತರುದ್ರಾಭಿಷೇಕ.
- ಮಾ.2ರಂದು ಪಾರ್ವತಿ ಸನ್ನಿಧಿಯಲ್ಲಿ ದೇವರ ದರ್ಶನ ಬಲಿ, ಸಂಜೆ 6ಕ್ಕೆ ಸಾಂಸ್ಕೃತಿಕ ಕಲಾ ವೈಭವ, ರಾತ್ರಿ 9ಕ್ಕೆ ಭಕ್ತಿ ಸಂಗೀತ ರಸಮಂಜರಿ, ರಾತ್ರಿ 12ಕ್ಕೆ ಪಾರ್ವತೀ-ಪರಮೇಶ್ವರ ಭೇಟಿ ಸಹಿತ ಚಂದ್ರ ಮಂಡಲ ಉತ್ಸವ.
- ಮಾ.3ರಂದು ಮಹಾ ರಥೋತ್ಸವ.
- ಮಾ.4ರ ಬೆಳಿಗ್ಗೆ 8ಕ್ಕೆ ದೇವರ ದರ್ಶನ ಬಲಿ, ಸಂಜೆ 6ಕ್ಕೆ ಯಕ್ಷಗಾನ ತಾಳಮದ್ದಳೆ, ರಾತ್ರಿ 11ಕ್ಕೆ ಪಾರ್ವತೀ-ಪರಮೇಶ್ವರ ಭೇಟಿ, ಕಟ್ಟೆ ಪೂಜೆ ಉತ್ಸವ.
- ಮಾ.5ಕ್ಕೆ ದೈವಗಳಿಗೆ ನೇಮೋತ್ಸವ.
ನಿತ್ಯವೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾರಿಂಜ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.