Sunday, June 8, 2025

11 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳನ್ನು ವಶಕ್ಕೆ ಪಡೆದ ಬಿಎಸ್‌ಎಫ್

ನವದೆಹಲಿ: ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಜರಾತ್‌ನ ಭುಜ್‌ನ ಹರಾಮಿ ನಲ್ಲಾದ ಕ್ರೀಕ್ ಪ್ರದೇಶದಲ್ಲಿ 11 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ ಗಳನ್ನು ವಶಕ್ಕೆ ಪಡೆದಿದೆ.

ಪಾಕಿಸ್ತಾನಿ ಮೀನುಗಾರರು ಒಳಗೆ ನುಗ್ಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಬಿಎಸ್‌ಎಫ್ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಹರಾಮಿ ನಲ್ಲಾ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದೆ. ಬುಧವಾರ ಮಧ್ಯಾಹ್ನ ಪ್ರಾರಂಭವಾದ ಶೋಧ ಕಾರ್ಯಾಚರಣೆಯಲ್ಲಿ 8 ಬೋಟ್​ಗಳನ್ನು, ಮತ್ತೆ ಗುರುವಾರ 3 ಬೋಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೋಟ್ ಗಳಲ್ಲಿ ಬಂದ ಪಾಕಿಸ್ತಾನಿಯರು ಅಡಗಿರುವ ಸ್ಥಳಗಳನ್ನು ಕಮಾಂಡೋಗಳು ಪತ್ತೆ ಹಚ್ಚುತ್ತಿದ್ದಾರೆ. ತೀವ್ರವಾದ ಜವುಗು ಪ್ರದೇಶ, ಮ್ಯಾಂಗ್ರೋವ್‌ಗಳು ಮತ್ತು ಉಬ್ಬರವಿಳಿತ ಪ್ರದೇಶಗಳಲ್ಲಿ ಸೈನಿಕರು ಕಾರ್ಯ ನಿರ್ವಹಿಸುವುದು ಸವಾಲಾಗಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ.

ಶೋಧ ಕಾರ್ಯ ಪ್ರಾರಂಭವಾಗಿ ಸುಮಾರು 30 ಗಂಟೆಗಳು ಕಳೆದಿವೆ. ಇನ್ನೂ ಶೋಧ ಕಾರ್ಯ ನಡೆಯುತ್ತಿದ್ದು ಪಾಕಿಸ್ತಾನಿಯರು ಈ ಪ್ರದೇಶದಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles