Saturday, June 7, 2025

ಅಭಿಮಾನಿಗಳಿಗೆ ಬಂಪರ್ ಆಫರ್‌ ನೀಡಿದ ಜೇಮ್ಸ್ ಚಿತ್ರತಂಡ

ಬೆಂಗಳೂರು: ಜೇಮ್ಸ್ ಚಿತ್ರ ತಂಡವು ಬೆಂಗಳೂರಿನಲ್ಲಿ ಒಂದು ವಾರ ಮೊದಲೇ ಮುಂಗಡ ಬುಕಿಂಗ್​ ಓಪನ್​ ಮಾಡುವ ಮೂಲಕ ಅಭಿಮಾನಿಗಳಿಗೆ ಬಂಪರ್‌ ಆಫರ್‌ ನೀಡಿದೆ.

ಪುನಿತ್ ರಾಜ್‌ ಕುಮಾರ್ ನಟನೆಯ ಜೇಮ್ಸ್ ಚಿತ್ರ ಮಾ.17ರಂದು ಬಿಡುಗಡೆಯಾಗಲಿದೆ. ಪುನೀತ್‌ ನಿಧನವಾಗುವ ಮೊದಲೇ ಚಿತ್ರದ ಬಹುತೇಕ ಕೆಲಸಗಳು ಪೂರ್ತಿಯಾಗಿದ್ದು, ಒಂದು ಹಾಡಿನ ಶೂಟಿಂಗ್‌ ಮಾತ್ರ ಬಾಕಿ ಇತ್ತು. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ತಿಯಾಗಿದ್ದು ಬಿಡುಗಡೆಗೆ ಸಿದ್ಧವಾಗಿದೆ.

ಜೇಮ್ಸ್‌ ಚಿತ್ರದ ಟೀಸರ್ ಹಾಗೂ ಹಾಡು ಯೂಟ್ಯೂಬ್​ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆಯಾಗಿದೆ. ಟೀಸರ್‌ ಹಾಗೂ ಹಾಡನ್ನು ವೀಕ್ಷಿಸಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ವಿಶ್ವಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಜೇಮ್ಸ್‌ ಚಿತ್ರ ಬಿಡುಗಡೆಗೊಳ್ಳಲಿದ್ದು, ಚಿತ್ರ ಬಿಡುಗಡೆಯಾಗುವ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles