ಲಂಡನ್: ರಾಣಿ ಎಲಿಜಬೆತ್ 2 ಧರಿಸುತ್ತಿದ್ದ ಕೊಹಿನೂರ್ ವಜ್ರವಿರುವ ಬೆಲೆಬಾಳುವ ಕಿರೀಟ ಅವರ ನಂತರ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ ಮುಡಿಗೇರಲಿದೆ ಎಂದು ಇಂಗ್ಲೆಂಡ್ ರಾಣಿ ಎಲಿಜಬೆತ್ 2 ಘೋಷಿಸಿದ್ದಾರೆ.
ಮುಂದಿನ ವರ್ಷ ರಾಣಿ ಎಲಿಜಬೆತ್ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಉತ್ತರಾಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಅವರ ಪಟ್ಟಾಭಿಷೇಕದ ಸಂದರ್ಭ ಅವರ ಪತ್ನಿ ಡಚೆಸ್ ಆಫ್ ಕಾರ್ನ್ವಾಲ್ ಕ್ಯಾಮಿಲ್ಲಾ ಅವರಿಗೆ ಕೊಹಿನೂರ್ ಕಿರೀಟವನ್ನು ಹಸ್ತಾಂತರಿಸಲಾಗುತ್ತದೆ.
ಈ ಕಿರೀಟದಲ್ಲಿರುವ ಕೊಹಿನೂರ್ ವಜ್ರವು ಭಾರತದಲ್ಲಿ 14ನೇ ಶತಮಾನದಲ್ಲಿ ಪತ್ತೆಯಾಗಿದ್ದು, ಇದಕ್ಕೆ 800 ವರ್ಷಗಳ ಭಾರತೀಯ ಇತಿಹಾಸವಿದೆ. ಇದು 1937 ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ ಸೇರಿತ್ತು. 105.6 ಕ್ಯಾರೆಟ್‌ನ ವಜ್ರ ಕಿರೀಟದಲ್ಲಿದೆ. ಈ ಕಿರೀಟವನ್ನು 2800 ವಜ್ರಗಳು ಹಾಗೂ ಪ್ಲಾಟಿನಂ ನಿಂದ ಮಾಡಲಾಗಿದೆ.