ನವದೆಹಲಿ: 2021-22ನೇ ಸಾಲಿನ ಸಿಬಿಎಸ್‌ಇ 10 ಮತ್ತು 12 ತರಗತಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಎ.26 ರಿಂದ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಶುಕ್ರವಾರ ತಿಳಿಸಿದೆ.
ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಗಳು ಎ.26ರಿಂದ ಮೇ24ರ ವರೆಗೆ ನಡೆಯಲಿದ್ದು, 12 ತರಗತಿಯ ಪರೀಕ್ಷೆಗಳು ಎ.26ರಿಂದ ಜೂ.1ರ ವರೆಗೆ ನಡೆಯಲಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.