Saturday, June 7, 2025

ಉಕ್ರೇನ್‌ನ ನಾಲ್ಕು ನಗರಗಳಲ್ಲಿ ಕದನ ವಿರಾಮ ಘೋಷಣೆ..!

ಮಾಸ್ಕೋ: ರಷ್ಯಾವು ಉಕ್ರೇನ್‌ನ ರಾಜಧಾನಿ ಕೀವ್‌, ಮರಿಯುಪೋಲ್‌, ಹಾರ್ಕಿವ್‌ ಮತ್ತು ಸುಮಿ ನಗರಗಳಲ್ಲಿ ಸೋಮವಾರ ಕದನ ವಿರಾಮ ಘೋಷಿಸಿದೆ.

ಮಾಸ್ಕೋ ಸಮಯ ಬೆಳಗ್ಗೆ 10ಗಂಟೆಯಿಂದ ಕದನ ವಿರಾಮ ಜಾರಿಗೆ ಬಂದಿದ್ದು, ಈ ನಾಲ್ಕು ನಗರಗಳಿಂದ ನಾಗರಿಕರನ್ನು ಸ್ಥಳಾಂತರಿಸುವ ಸಲುವಾಗಿ ರಷ್ಯಾವು ಕದನ ವಿರಾಮ ಘೋಷಿಸಿದೆ. ಹಾಗೂ ರಷ್ಯಾ ಸೇನೆಯು ಮಾನವೀಯ ಕಾರಿಡಾರ್‌ಗಳನ್ನು ತೆರೆಯುವುದಾಗಿ ಘೋಷಣೆ ಮಾಡಿದೆ.

ರಷ್ಯಾವು ಮಾ.5ರಂದು ಮರಿಯುಪೋಲ್‌ ಮತ್ತು ವೊಲ್ನೋವಾಖಾ ನಗರಗಳ ನಾಗರೀಕರು ಸ್ಥಳಾಂತರವಾಗಲು ಸಂಜೆ 5ಗಂಟೆಯವರೆಗೆ ಕದನ ವಿರಾಮ ಘೋಷಿಸಿತ್ತು. ರಷ್ಯಾವು ಈ ಕದನ ವಿರಾಮವನ್ನು ಉಲ್ಲಂಘಿಸಿ ಶೆಲ್‌ ದಾಳಿ ನಡೆಸಿದ್ದರಿಂದ ನಾಗರಿಕ ಸ್ಥಳಾಂತರಕ್ಕೆ ಅಡ್ಡಿಯಾಯಿತು ಎಂದು ಉಕ್ರೇನ್‌ ಆರೋಪ ಮಾಡಿತ್ತು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles