Saturday, June 7, 2025

ನಿಮಗೆ ಈ ಅಭ್ಯಾಸವಿದ್ರೆ ಇಂದೇ ಬದಲಾಯಿಸಿಕೊಳ್ಳಿ

ನಮಗೆ ತಿಳಿಯದ ಹಾಗೆ ನಮ್ಮ ಕೆಲವು ಜೀವನ ಶೈಲಿ ಗಳು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತವೆ. ಇಂದು ನಾವು ಮಾಡುವ ನಿದ್ರೆ, ಊಟ, ಕೆಲಸಗಳ ಸಮಯ ಬದಲಾವಣೆಯಾಗಿದ್ದು, ಇದರಿಂದ ನಮ್ಮ ಆರೋಗ್ಯ ಏರುಪೇರಾಗುತ್ತದೆ. ನಮ್ಮ ಕೆಲವು ಜೀವನ ಶೈಲಿಗಳನ್ನು ಬದಲಾಯಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದಾಗಿದೆ.

ತಡ ರಾತ್ರಿ ಊಟ ಮಾಡುವುದರಿಂದ ಆಗುವ ಪರಿಣಾಮಗಳು:

  • ಕೆಲವರು ಪ್ರತಿ ನಿತ್ಯ ವ್ಯಾಯಾಮ, ಡಯಟ್ ಇವೆಲ್ಲವನ್ನೂ ಮಾಡುತ್ತೇವೆ ಆದರೂ ತೂಕ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಆದರೆ ಇದಕ್ಕೆ ಮುಖ್ಯ ಕಾರಣ ರಾತ್ರಿ ನಾವು ಊಟ ಮಾಡುವ ಸಮಯವಾಗಿರುತ್ತದೆ. ರಾತ್ರಿ ತಡವಾಗಿ ಊಟ ಮಾಡುವುದರಿಂದ ದೇಹದ ತೂಕ ಜಾಸ್ತಿ ಆಗುತ್ತದೆ. ತೂಕ ಇಳಿಸಿಕೊಳ್ಳುವ ಹಂಬಲವಿದ್ದರೆ ರಾತ್ರಿ ಸರಿಯಾದ ಸಮಯಕ್ಕೆ ಊಟ ಮಾಡಬೇಕು.
  • ತಡರಾತ್ರಿ ಊಟ ಮಾಡುವುದರಿಂದ ನಮ್ಮ ಮೆದುಳಿಗೆ ಹಾನಿಯುಂಟಾಗುತ್ತದೆ. ಇದರಿಂದ ನೆನಪಿನ ಶಕ್ತಿ, ಏಕಾಗ್ರತೆ ಮೇಲೆ ಪ್ರಭಾರ ಬೀರುತ್ತದೆ.
  • ತಡರಾತ್ರಿ ಊಟ ಮಾಡಿ ತಕ್ಷಣ ಮಲಗುವುದರಿಂದ ಜೀರ್ಣಕ್ರಿಯೆಗೆ ಹೆಚ್ಚಿನ ಸಮಯ ಸಿಗುವುದಿಲ್ಲ. ಇದರಿಂದ ಹೃದಯದಲ್ಲಿ ನೋವು, ಅಸಿಡಿಟಿ, ಎದೆಯ ಮಧ್ಯದಲ್ಲಿ ನೋವಿನಂತಹ ಸಮಸ್ಯೆಗಳು ಉಂಟಾಗುತ್ತದೆ.
  • ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಮೆಲಟೋನಿನ್ ಮಟ್ಟವು 2.5 ಪಟ್ಟು ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ.
  • ತಡರಾತ್ರಿ ಊಟದ ಬದಲು ಜಂಕ್ ಫುಡ್ ತಿನ್ನುವುದು ಅಪಾಯಕಾರಿ. ತಡರಾತ್ರಿ ಜಂಕ್ ಫುಡ್ ಸೇವಿಸುವುದರಿಂದ ಇದು ಸರಿಯಾಗಿ ಜೀರ್ಣವಾಗುವುದಿಲ್ಲ. ಆದ್ದರಿಂದ ಜಂಕ್ ಫುಡ್ ಗಳನ್ನು ಆದಷ್ಟು ಸಂಜೆ ವೇಳೆ ಸೇವಿಸುವುದು ಉತ್ತಮ
  • ತಡರಾತ್ರಿ ಊಟ ಮಾಡುವುದು ಆರೋಗ್ಯವಲ್ಲವೆಂದು ಬಹುಬೇಗನೆ ಊಟ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಊಟ ಮಾಡುವುದೇ ಉತ್ತಮ. ಇನ್ನು ರಾತ್ರಿ ವೇಳೆ ಅಗತ್ಯಕ್ಕಿಂತ ಹೆಚ್ಚು ಊಟ ಮಾಡದೇ ಕಡಿಮೆ ಊಟ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles