ಮಂಗಳೂರು: ನಗರದ ಕಂಕನಾಡಿಯ ಬೈಪಾಸ್ ರಸ್ತೆಯ ಬಳಿಯ ಸಿಟಿ ಗೋಲ್ಡ್ ಸಂಸ್ಥೆಯ ವತಿಯಿಂದ ಮೇ 20ರಿಂದ ಜೂನ್ 5ರವರೆಗೆ ‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ ನಡೆಯಲಿದೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪ್ರೈಡ್ ಉದ್ಘಾಟಿಸಲಿದ್ದು, ‘ವೆಡ್ಡಿಂಗ್ ವಿಂಟೇಜ್ ಪ್ರೀಮಿಯಂ ಆಂಟಿಕ್ ಕಲೆಕ್ಷನ್’ನ್ನು ಬಿ ಹ್ಯೂಮನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಸೀಫ್ ಡೀಲ್ಸ್ ಉದ್ಘಾಟಿಸಲಿದ್ದಾರೆ. ಹಾಗೂ ಫೆಸ್ಟಿವಲ್ ಪ್ರಯುಕ್ತ ‘ಆರ್ ಯು ದಿ ಡೈಮಂಡ್ ಸ್ಟಾರ್’ ಸ್ಪರ್ಧೆ ನಡೆಯಲಿದ್ದು, ಅದರ ಅಂಗವಾಗಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಫೆಸ್ಟಿವಲ್ ಪ್ರಯುಕ್ತ ಗ್ರಾಹಕರು ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣಗಳ ಉಚಿತ ನಿರ್ವಹಣೆ, ಉಚಿತ ಗುಣಮಟ್ಟ ತಪಾಸಣೆ, ಬದಲಿಯಾಗಿ ಹೊಸ ವಜ್ರಾಭರಣವನ್ನು ಪಡೆದುಕೊಳ್ಳಬಹುದು. ಹಾಗೂ ವಜ್ರಾಭರಣ ತಯಾರಿಸುವ ವಿನ್ಯಾಸಕಾರರು ಸಂಸ್ಥೆಯ ಮಳಿಗೆಯಲ್ಲಿ ಲಭ್ಯರಿರುತ್ತಾರೆ. ಸಿಟಿ ಗೋಲ್ಡ್ ವತಿಯಿಂದ ಗ್ರಾಹಕರಿಗೆ ಖರೀದಿಯ ಮೇಲೆ ಹಲವಾರು ರಿಯಾಯಿತಿಯನ್ನು ಸಂಸ್ಥೆ ನೀಡುತ್ತಿದೆ. ಡೈಮಂಡ್ ಖರೀದಿಯ ಮೇಲೆ ಪ್ರತಿಯೊಂದು ಕ್ಯಾರೆಟ್ನಲ್ಲಿ 20 ಸಾವಿರ ರೂ. ಡಿಸ್ಕೌಂಟ್, ಅನ್ಕಟ್ ಡೈಮಂಡ್ ಮೇಲೆ ಶೇ.30 ಡಿಸ್ಕೌಂಟ್, ಪ್ರಿಸೆಸ್ ನೆಕ್ಲೆಸ್ ಮೇಲೆ ‘ನೋ ಮೇಕಿಂಗ್ ಚಾರ್ಜ್’ ಎಂಬ ವಿಶೇಷ ಕೊಡುಗೆಯನ್ನು ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.


ಇನ್ನು ಗ್ರಾಹಕರು ಸಿಟಿಗೋಲ್ಡ್ ಮಳಿಗೆಗೆ ಆಗಮಿಸಿ ವಜ್ರಾಭರಣ ಧರಿಸಿ ಸೆಲ್ಫಿ ತೆಗೆದು ಫೋಟೋವನ್ನು ತಮ್ಮ ಇನ್ಸ್ಟ್ರಾಗ್ರಾಮ್ ಅಥವಾ ಸ್ಟೇಟಸ್ನಲ್ಲಿ ಹಾಕಿ ಸಿಟಿ ಗೋಲ್ಡ್ ಇನ್ಸ್ಟ್ರಾಗ್ರಾಮ್ ಐಡಿಗೆ ಟ್ಯಾಗ್ ಮಾಡಬಹುದು. ಯಾವ ಗ್ರಾಹಕರ ಪೋಸ್ಟ್ ಹೆಚ್ಚು ಲೈಕ್ ಪಡೆಯುತ್ತದೆಯೋ ಆ ಗ್ರಾಹಕರಿಗೆ ಸಿಟಿ ಗೋಲ್ಡ್ ವತಿಯಿಂದ ವಜ್ರಾಭರಣ ಬಹುಮಾನವಾಗಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.