Sunday, June 8, 2025

ಬ್ರಿಟನ್ ಸರ್ಕಾರದಿಂದ ಕೋವಿಡ್ ನಿರ್ಬಂಧಗಳ ತೆರವು

ಲಂಡನ್: ಕೊರೋನಾ ಸೋಂಕಿನ ಪ್ರಕರಣಗಳು ಅಧಿಕವಿದ್ದ ದೇಶಗಳಲ್ಲಿ ಒಂದಾದ ಇಂಗ್ಲೆಂಡ್ ನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಕೊರೋನಾ ನಿಯಮಗಳನ್ನು ತೆಗೆದು ಹಾಕಲಾಗಿದೆ. ಕೋವಿಡ್ ಲಸಿಕೆಯು ಅನಾರೋಗ್ಯದ ಪರಿಣಾಮವನ್ನು ಕಡಿಮೆ ಮಾಡಿದೆ ಎಂದು ಬ್ರಿಟನ್ ಸರ್ಕಾರವು ತಿಳಿಸಿದೆ.

ಸರ್ಕಾರವು ಗುರುವಾರದಿಂದಲೇ ಇಂಗ್ಲೆಂಡ್ ನಲ್ಲಿ ಜನರು ಕಾನೂನಿನ ಅನುಸಾರ ಮಾಸ್ಕ್ ಧರಿಸುವ ಅಗತ್ಯವಿಲ್ಲ. ನೈಟ್‌ಕ್ಲಬ್‌ಗಳು ಹಾಗೂ ಇತರ ದೊಡ್ಡ ಸ್ಥಳಗಳಿಗೆ ಹೋಗಲು ಕೋವಿಡ್ ಪಾಸ್ ಗಳ ಕಡ್ಡಾಯವನ್ನು ರದ್ದು ಮಾಡಲಾಗದೆ. ತರಗತಿಗಳಲ್ಲಿ ಮಾಸ್ಕ್ ಧರಿಸುವ ಕಡ್ಡಾಯ ನಿಯಮವನ್ನು ಹಾಗೂ ಜನರು ಮನೆಯಿಂದಲೇ ಕೆಲಸ ಮಾಡುವ ಸಲಹೆಯನ್ನು ಕಳೆದ ವಾರವೇ ಸರ್ಕಾರ ಕೈಬಿಟ್ಟಿದೆ.

ಇನ್ನು ಬ್ರಿಟನ್ ನಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ 84 ಶೇಕಡ ಜನರು ಎರಡೂ ಲಸಿಕೆಗಳನ್ನು ಹಾಗೂ ಅರ್ಹರಲ್ಲಿ 81 ಶೇಕಡ ಜನರು ತಮ್ಮ ಬೂಸ್ಟರ್ ಡೋಸ್ ಅನ್ನು ಕೂಡ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles