Saturday, June 7, 2025

ಐದೇ ದಿನದಲ್ಲಿ ಕರಗಿ ಹೋಯ್ತು ಕೊತ್ತಂಬರಿಸೊಪ್ಪಿನ ಐಸ್‌ಕ್ರೀಮು..!

ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಮಾತ್ರ ಬಳಸುತ್ತೇವೆ. ಆದರೆ ಚೀನಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ ಕೊತ್ತಂಬರಿ ಸೊಪ್ಪಿನ ಐಸ್‌ಕ್ರೀಂ ತಯಾರಿಸಿದ್ದು, ಇದಕ್ಕೆ ಮೆಕ್‌ಫ್ಲರಿ ಎಂದು ಹೆಸರಿಟ್ಟಿದೆ.

ಮ್ಯಾಕ್‌ಡೊನಾಲ್ಡ್ಸ್‌ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನೊಂದಿಗೆ ಸಂಡೇ ಫಾಸ್ಟ್‌ಫುಡ್‌ ಚೈನ್‌ನ ಕ್ಲಾಸಿಕ್‌ ವೆನಿಲ್ಲಾ ಸಾಫ್ಟ್‌ ಅನ್ನು ನೀಡುತ್ತಿದೆ. ಹಸಿರು ನಿಂಬೆ ಹಾಗೂ ಕೊತ್ತಂಬರಿ ಸಾಸ್‌ಅನ್ನು ಐಸ್‌ಕ್ರೀಂ ಮೇಲೆ ಹಾಕಲಾಗುತ್ತದೆ. ಫೆ.21ರಂದು ಬಿಡುಗಡೆಯಾದ ಈ ಐಸ್‌ಕ್ರೀಂ ಫೆ.25ರವರೆಗೆ ಲಭ್ಯವಿತ್ತು.

ಈ ಕೊತ್ತಂಬರಿಸೊಪ್ಪಿನ ಐಸ್‌ಕ್ರೀಂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಐಸ್‌ಕ್ರೀಂ ಅನ್ನು ತಿನ್ನುವ ಹಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಸಹ್ಯ ವ್ಯಕ್ತಪಡಿಸಿದ್ದಾರೆ. ಈ ತಿನಿಸಿನ ಬೆಲೆಯು 6.6 ಯುವಾನ್‌ ಆಗಿದ್ದು, ಭಾರತದ ರೂಪಾಯಿಗೆ ಹೋಲಿಸಿದರೆ 77.99 ರುಪಾಯಿ ಆಗುತ್ತದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles