ಚೀನಾ: ದೇಶದಲ್ಲಿ ವಿಯೆಟ್ನಾಂನಿಂದ ಡ್ರ್ಯಾಗನ್ ಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಈ ಹಣ್ಣುಗಳಲ್ಲಿ ಕೊರೊನಾವೈರಸ್ ಕುರುಹುಗಳು ಪತ್ತೆಯಾಗಿದ್ದು, ಚೀನಾದ ಅಧಿಕಾರಿಗಳು ಹಲವಾರು ಸೂಪರ್ ಮಾರ್ಕೆಟ್ ಗಳನ್ನು ಲಾಕ್ ಮಾಡಿದ್ದಾರೆ. ವರದಿಗಳ ಪ್ರಕಾರ ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯಗಳ ಕನಿಷ್ಠ ಒಂಬತ್ತು ನಗರಗಳು ವಿಯೆಟ್ನಾಂನಿಂದ ಡ್ರ್ಯಾಗನ್ ಹಣ್ಣುಗಳನ್ನು ಆಮದು ಮಾಡಿಕೊಂಡಿದ್ದು ಈ ಹಣ್ಣುಗಳಲ್ಲಿ ಕೊರೊನಾ ವೈರಸ್ ಮಾದರಿಯು ಪತ್ತೆಯಾಗಿದೆ.
ಡ್ರ್ಯಾಗನ್ ಹಣ್ಣಿನಲ್ಲಿ ಕೊರೋನಾ ವೈರಸ್ ಪತ್ತೆಯ ಹಿನ್ನಲೆಯಲ್ಲಿ, ಚೀನಾದ ಅಧಿಕಾರಿಗಳು ಆಮದು ಮಾಡಿದ ಆಹಾರ ಉತ್ಪನ್ನಗಳನ್ನು ತುರ್ತು ತಪಾಸಣೆ ಮಾಡಲು ಆದೇಶ ನೀಡಿದ್ದಾರೆ. ಈ ಹಣ್ಣಿನಿಂದ ಕೊರೊನಾ ಹರಡಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದಿದ್ದರೂ ಹಣ್ಣು ಖರೀದಿ ಮಾಡಿರುವವರನ್ನು ಸ್ವಯಂ ಕ್ವಾರಂಟೈನ್ ಆಗಲು ಸೂಚನೆ ನೀಡಿದ್ದಾರೆ.
ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಡಿಸೆಂಬರ್ ಕೊನೆಯ ವಾರದಂದು ಕೋವಿಡ್-19 ಕುರುಹುಗಳು ಪತ್ತೆಯಾಗಿದೆ. ಆದ್ದರಿಂದ ಚೀನಾ ಇದರ ಮೇಲೆ ಜನವರಿ 26 ರವರೆಗೆ ನಿಷೇಧ ಹೇರಿದೆ.