ಉಡುಪಿ: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ನಡುವೆಯೂ ಕೊರೊನಾ ಪ್ರಕರಣಗಳು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಭಾನುವಾರದಂದು 340 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯ ಪಾಸಿಟಿವಿಟಿ ದರವು ಶೇ.3.86ಕ್ಕೆ ಏರಿಕೆಯಾಗಿದೆ. 262 ಪ್ರಕರಣಗಳು ಉಡುಪಿಯಲ್ಲಿ, 29 ಪ್ರಕರಣಗಳು ಕುಂದಾಪುರದಲ್ಲಿ , 49 ಪ್ರಕರಣಗಳು ಕಾರ್ಕಳದಲ್ಲಿ ದೃಢಪಟ್ಟಿವೆ.
ಪ್ರಸ್ತುತ ಜಿಲ್ಲೆಯಲ್ಲಿ 979 ಪ್ರಕರಣಗಳು ಸಕ್ರಿಯವಾಗಿದೆ. 340 ಮಂದಿಯಲ್ಲಿ 279 ಮಂದಿಯನ್ನು ಹೋಂ ಐಸೊಲೇಶನ್ಗೆ, 52 ಮಂದಿಯನ್ನು ಕೋವಿಡ್ ಕೇರ್ ಸೆಂಟರ್ಗೆ, 9 ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗೂ ಭಾನುವಾರದಂದು 77 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.