ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 50,210 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 35,17,682 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ 26,299, ಮೈಸೂರಿನಲ್ಲಿ 4,359, ತುಮಕೂರಿನಲ್ಲಿ 1,963, ಹಾಸನದಲ್ಲಿ 1,922, ಮಂಡ್ಯದಲ್ಲಿ 1,455, ಕೊಡಗಿನಲ್ಲಿ 1,139, ಧಾರವಾಡದಲ್ಲಿ 955, ಉಡುಪಿಯಲ್ಲಿ 947, ಬೆಂಗಳೂರು ಗ್ರಾಮಾಂತರದಲ್ಲಿ 925, ಬಳ್ಳಾರಿಯಲ್ಲಿ 904, ಬೆಳಗಾವಿಯಲ್ಲಿ 885, ಕಲಬುರಗಿಯಲ್ಲಿ853, ಕೋಲಾರದಲ್ಲಿ 824, ದಕ್ಷಿಣ ಕನ್ನಡದಲ್ಲಿ 770, ಚಾಮರಾಜ ನಗರದಲ್ಲಿ 664, ಉತ್ತರ ಕನ್ನಡದಲ್ಲಿ 641, ಶಿವಮೊಗ್ಗದಲ್ಲಿ 611, ಚಿಕ್ಕಬಳ್ಳಾಪುರದಲ್ಲಿ 552, ದಾವಣಗೆರೆಯಲ್ಲಿ 495, ರಾಯಚೂರಿನಲ್ಲಿ 410, ಬೀದರ್‌ನಲ್ಲಿ 368, ಬಾಗಲಕೋಟೆಯಲ್ಲಿ 331, ಗದಗದಲ್ಲಿ 274, ವಿಜಯಪುರದಲ್ಲಿ 249, ಚಿತ್ರದುರ್ಗದಲ್ಲಿ 246, ರಾಮನಗರದಲ್ಲಿ 199, ಹಾವೇರಿಯಲ್ಲಿ165, ಯಾದಗಿರಿಯಲ್ಲಿ 151, ಚಿಕ್ಕಮಗಳೂರು ಜಿಲ್ಲೆಯಲ್ಲಿ 144 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ನಿನ್ನೆ ಒಂದೇ ದಿನ 22,842ಮಂದಿ ಕೊರೊನ ಸೋಂಕಿನಿಂದ ಗುಣಮುಖರಾಗಿದ್ದು, ಒಂದೇ ದಿನ ೧೯ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು, ಪ್ರಸ್ತುತ ರಾಜ್ಯದಲ್ಲಿ 3,57,796 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಈವರೆಗೆ 931 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.