ಹೈದರಾಬಾದ್: ದೇಶದಲ್ಲಿ ಇದೀಗ ಕೋವಿಡ್ ಮೂರನೇ ಅಲೆ ಭೀತಿ ಹೆಚ್ಚಾಗಿತ್ತಿದೆ. ಈ ನಡುವೆ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಕೋವಿಡ್ ಚಿಕಿತ್ಸೆಗಾಗಿ ಮಾಲ್ ಫ್ಲೂ (ಮೊಲ್ನುಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸಲಾಗುತ್ತದೆ ಎಂದು ಮಂಗಳವಾರ ಹೇಳಿದೆ.
ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿಯಾಗಿದೆ. ಮಾಲ್ ಪ್ಲೂ ಮಾತ್ರೆಗಳ ಬೆಲೆ ಕೇವಲ 35 ರೂ. ಆಗಿದೆ. ಕೋವಿಡ್ ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಈ ಮಾತ್ರೆಗಳನ್ನು ತಯಾರಿಸಲಾಗಿದೆ. ಮುಂದಿನವಾರದಲ್ಲಿ ದೇಶಾದ್ಯಂತ ಔಷಧ ಮಾರುಕಟ್ಟೆಗಳಲ್ಲಿ ಮಾಲ್ ಪ್ಲೂ ಮಾತ್ರೆಗಳು ಸಿಗಲಿದೆ. ಒಂದು ಸ್ಟ್ರೀಪ್ ನಲ್ಲಿ 10 ಮಾತ್ರೆಗಳು ಇರಲಿವೆ ಎಂಬ ಮಾಹಿತಿಯನ್ನು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಭಾರತ ಹಾಗೂ 100 ಕಡಿಮೆ, ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಗೆ ಎಂಎಸ್ ಡಿ ಕಂಪನಿಯೊಂದಿಗೆ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮಾಲ್ ಫ್ಲೂ ಮಾತ್ರೆ ಪೂರೈಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ತಜ್ಞರ ಸಮಿತಿಗೆ ಈ ಮಾತ್ರೆಗಳ ಮೂರನೇ ಹಂತದ ಪ್ರಯೋಗದ ಫಲಿತಾಂಶವನ್ನು ನೀಡಲಾಗಿತ್ತು.
ಕಳೆದ ವಾರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) 200 ಎಂಜಿ ಮಾಲ್ ಫ್ಲೂ ಮಾತ್ರೆಗಳನ್ನು ಆಸ್ಪತ್ರೆಯಲ್ಲಿರುವ ಅಥವಾ ಹೆಚ್ಚಿನ ಅಪಾಯವಿರುವ ವಯಸ್ಕ ರೋಗಿಗಳಿಗೆ ತಯಾರಿಕೆ ಹಾಗೂ ಮಾರುಕಟ್ಟೆಗಾಗಿ ಅನುಮತಿ ನೀಡಿತ್ತು.