ನವದೆಹಲಿ: ಎನ್ಟಿಜಿಐನ ಕೋವಿಡ್ ವರ್ಕಿಂಗ್ ಗ್ರೂಪ್ ಅಧ್ಯಕ್ಷ ಡಾ ಎನ್ಕೆ ಅರೋರಾ ಅವರು ದೇಶದಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ನಿಂದ ಕೋವಿಡ್ ಲಸಿಕೆ ನೀಡುವ ಸಾಧ್ಯತೆ ಇದೆ. ಹಾಗೂ ಅರ ಒಳಗೆ 15 ರಿಂದ 18 ವರ್ಷದವರೆಲ್ಲರಿಗೂ ಸಂಪೂರ್ಣವಾಗಿ ಲಸಿಕೆ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಅಂದಾಜು 7.4 ಕೋಟಿ 15 ರಿಂದ 18 ವಯೋಮಾನದ ಮಕ್ಕಳ ಪೈಕಿ ಈಗಾಗಲೇ 3.45 ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಾಕ್ಸಿನ್ನ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಈ ಮಕ್ಕಳಿಗೆಲ್ಲ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ. ಈ ಬಳಿಕ ಮಾರ್ಚ್ನಿಂದ ಸರ್ಕಾರವು 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಡಾ ಎನ್ಕೆ ಅರೋರಾ ತಿಳಿಸಿದ್ದಾರೆ.