ನವದೆಹಲಿ: ಕೋವಿಡ್ ಸೋಂಕಿನ ತಡೆಗೆ ಮೂಗಿನ ಮೂಲಕ ಸ್ಪ್ರೇ ಮಾಡುವ ಔಷಧಕ್ಕೆ ಭಾರತದ ಔಷಧ ನಿಯಂತ್ರಕ ಮಹಾನಿರ್ದೇಶನಾಲಯ(ಡಿಸಿಜಿಐ) ಔಷಧ ತಯಾರಿ ಹಾಗೂ ಮಾರಾಟಕ್ಕೆ ಅನುಮತಿ ನೀಡಿದೆ. ‘ಫ್ಯಾಬಿಸ್ಪ್ರೇ’ ನೇಸಲ್ ಸ್ಪ್ರೇ ಔಷಧವನ್ನು ‘ಸ್ಯಾನೋಟೈಜ್’ ಸಂಸ್ಥೆ ಜೊತೆ ಸೇರಿ ಔಷಧ ತಯಾರಿಸಲಾಗುತ್ತಿದೆ.
ನೇಸಲ್ ಸ್ಪ್ರೇ ಯು ಶ್ವಾಸಕೋಶದೊಳಗಿನ ಸೋಂಕಿನ ವಿರುದ್ಧ ಹೋರಾಡುವುದಿಲ್ಲ ಆದರೆ ಶ್ವಾಸಕೋಶ ಸೇರುವ ಮೊದಲೇ ಸೋಂಕನ್ನು ಭೌತಿಕ ಹಾಗೂ ರಾಸಾಯನಿಕವಾಗಿ ತಡೆಯುತ್ತದೆ ಎಂದು ಔಷಧ ತಯಾರಿಕಾ ಕಂಪನಿ ತಿಳಿಸಿದೆ.
ಈಗಾಗಲೇ ಎರಡು ಹಂತಗಳ ಪರೀಕ್ಷೆಯನ್ನು ಮಾಡಲಾಗಿದ್ದು, ಇದರಲ್ಲಿ ನೇಸಲ್ ಸ್ಪ್ರೇ ಯು ಉತ್ತಮ ಫಲಿತಾಂಶ ನೀಡಿದೆ. ಔಷಧಿ ಬಳಸಿದ 24 ಗಂಟೆಯಲ್ಲಿ ಶೇ.94 ಸೋಂಕು ಕಡಿಮೆಯಾಗಿದೆ. ಹಾಗೂ 48 ಗಂಟೆಗಳಲ್ಲಿ ಶೇ.99 ಸೋಂಕು ಕಡಿಮೆಯಾಗಿದೆ.