ಗುಜರಾತ್: ದ್ರಾವಕ ಭಟ್ಟಿ ಇಳಿಸುವ ವೇಳೆ ರಿಯಾಕ್ಟರ್ ಸ್ಪೋಟವಾಗಿ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ ದುರ್ಘಟನೆ ಗುಜರಾತ್ನ ಬರೂಚ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ರಾಸಾಯನಿಕ ರಿಯಾಕ್ಟರ್ನಿಂದ ಸ್ಫೋಟ ಉಂಟಾಗಿದ್ದು, ಅದರ ಬಳಿ ಇದ್ದ ಆರು ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ದೇಹವನ್ನು ಕಾರ್ಖಾನೆಯಿಂದ ಹೊರತೆಗೆದು ಮರಣೊತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಫೋಟದಿಂದ ಉಂಟಾದ ಬೆಂಕಿಯನ್ನು ನಂದಿಸಿದ್ದು, ಮೃತರನ್ನು ಹೊರತು ಪಡಿಸಿ ಬೇರೆ ಯಾರಿಗೂ ಗಾಯವಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬರೂಚ್ ಎಸ್ಪಿ ಲೀನಾ ಪಾಟೀಲ್ ತಿಳಿಸಿದ್ದಾರೆ.