Sunday, June 8, 2025

ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ ಲೀಸರ್ ವಿಲೀನಕ್ಕೆ ನಿರ್ಧಾರ

ನವದೆಹಲಿ: ಭಾರತದ ಎರಡು ದೊಡ್ಡ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ ಲೀಸರ್ ಗಳನ್ನು ವಿಲೀನ ಮಾಡಲು ಭಾನುವಾರ ನಿರ್ಧಾರ ಮಾಡಲಾಗಿದೆ.

ಪಿವಿಆರ್ ಮತ್ತು ಐನಾಕ್ಸ್ ಕಂಪನಿಯ ಮಂಡಳಿಗಳು ಯೋಜನೆಗೆ ಪರಸ್ಪರ ಅನುಮೋದನೆ ನೀಡಲಾಗಿದೆ. ಈ ವಿಲೀನದ ನಂತರ ಷೇರುಗಳ ಅನುಪಾತ – ಐನಾಕ್ಸ್ ನ 10 ಷೇರುಗಳಿಗೆ, ಪಿವಿಆರ್ ನ ಮೂರು ಷೇರುಗಳು ಇರಲಿವೆ. ಹಾಗೂ ಐನಾಕ್ಸ್ ಪ್ರವರ್ತಕರು ಸಂಯೋಜಿತ ಘಟಕದಲ್ಲಿ ಶೇ. 16.66 ಪಾಲು ಮತ್ತೆ ಪಿವಿಆರ್ ಪ್ರವರ್ತಕರು ಶೇ. 10.62 ಪಾಲನ್ನು ಹೊಂದಲಿದ್ದಾರೆ.
ವಿಲೀನ ಪೂರ್ಣಗೊಂಡ ನಂತರ, ಕಂಪನಿಯನ್ನು ಪಿವಿಆರ್ ಐನಾಕ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ. ದೇಶದ 72 ನಗರಗಳಲ್ಲಿ ಐನಾಕ್ಸ್ ನ 675 ಪರದೆ, 73 ನಗರಗಳಲ್ಲಿ ಪಿವಿಆರ್ ಸಿನಿಮಾಸ್‌ನ 871 ಪರದೆಗಳಿವೆ. ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ ಲೀಸರ್‌ನ ವಿಲೀನದ ನಂತರ ಭಾರತದಾದ್ಯಂತ 1500ಕ್ಕೂ ಹೆಚ್ಚು ಪರದೆಗಳನ್ನು ಹೊಂದಲಿವೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles