Saturday, June 7, 2025

ಡೆಲ್ಟಾ ಮತ್ತು ಒಮಿಕ್ರಾನ್​ ಸಂಯೋಜಿತ ರೂಪಾಂತರಿ ಡೆಲ್ಟಾಕ್ರಾನ್ ಪತ್ತೆ

ಕೊವಿಡ್​ 19 ದಿನದಿಂದ ದಿನಕ್ಕೆ ಹೊಸ ಹೊಸ ರೂಪವನ್ನು ಪಡೆಯುತ್ತಿದೆ. ಈಗಾಗಲೇ ರೂಪಾಂತರಗೊಂಡ ಡೆಲ್ಟಾ ಮತ್ತು ಒಮಿಕ್ರಾನ್​ ಜನರಲ್ಲಿ ಆತಂಕ ಸೃಷ್ಟಿಸಿವೆ. ಒಮಿಕ್ರಾನ್​ನ ಬಹಳ ವೇಗವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಯುರೋಪ್​​ನ ದ್ವೀಪ ರಾಷ್ಟ್ರವಾದ ಸೈಪ್ರಸ್​​ನಲ್ಲಿ ಕೊವಿಡ್​ 19ನ ಮತ್ತೊಂದು ಹೊಸ ರೂಪಾಂತರಿ ಕಾಣಿಸಿಕೊಂಡಿದೆ. ಇಲ್ಲಿ 25 ಡೆಲ್ಟಾಕ್ರಾನ್ ಪ್ರಕರಣಗಳು ವರದಿಯಾಗಿದೆ. ಇದನ್ನು ಡೆಲ್ಟಾ ಮತ್ತು ಒಮಿಕ್ರಾನ್​ ವೈರಸ್​ಗಳ ಸಂಯೋಜಿತ ರೂಪಾಂತರಿ ಎನ್ನಲಾಗುತ್ತಿದೆ. ಈ ರೂಪಾಂತರಿಗೆ ಡೆಲ್ಟಾಕ್ರಾನ್​ ಎಂದು ಹೆಸರಿಡಲಾಗಿದೆ. ಈ ಕುರಿತು ಸೈಪ್ರಸ್ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ ಪ್ರಯೋಗಾಲಯದ ಮುಖ್ಯಸ್ಥರಾದ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಅವರು ಮಾಹಿತಿ ನೀಡಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles