ಲಂಡನ್: ಬ್ರಿಟನ್ ನ ವೈರಾಣು ತಜ್ಞರೊಬ್ಬರು ಡೆಲ್ಟಾಕ್ರಾನ್ ಡೆಲ್ಟಾ ಮತ್ತು ಒಮಿಕ್ರಾನ್ ಸಂಯೋಜಿತ ರೂಪಾಂತರಿಯಲ್ಲ. ಡೆಲ್ಟಾಕ್ರಾನ್ ಅನ್ನು ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಲಾಗಿದೆ.
ಸಿಪ್ರಸ್ ನ ವಿಜ್ಞಾನಿಯೊಬ್ಬರು ಡೆಲ್ಟಾಕ್ರಾನ್ ಎಂಬ ಹೊಸ ರೂಪಾಂತರಿಯನ್ನು ನಮ್ಮ ತಂಡ ಪತ್ತೆಮಾಡಿದೆ ಎಂದು ಹೇಳಿಕೆ ನೀಡಿದ್ದರು.
ಲಂಡನ್ ಇಂಪೀರಿಯಲ್ ಕಾಲೇಜಿನ ವೈರಾಣು ತಜ್ಞ ಟಾಮ್ ಪೀಕಾಕ್ ಅವರು ಡೆಲ್ಟಾಕ್ರಾನ್ ಹೊಸ ರೂಪಾಂತರಿಯಲ್ಲ. ಅದು ಪ್ರಯೋಗಾಲಯದಲ್ಲಿ ಮಿಶ್ರಗೊಂಡು ಸೃಷ್ಟಿಯಾಗಿರುವುದು. ಪ್ರಯೋಗಾಲಯದಲ್ಲಿನ ಮಿಶ್ರಣದಿಂದಾಗಿ ಉಂಟಾದ ರೂಪಾಂತರಿಗಳು ಅಸಾಮಾನ್ಯವೇನು ಅಲ್ಲ. ಸಾಮಾನ್ಯವಾಗಿ ಈ ಕುರಿತು ಯಾರೂ ಗಮನ ನೀಡುವುದಿಲ್ಲ. ಒಮಿಕ್ರಾನ್ ದೀರ್ಘ ಕಾಲದವರೆಗೆ ಹರಡುವುದಿಲ್ಲ. ಹೊಸ ರೂಪಾಂತರಿಯನ್ನು ಸೃಷ್ಟಿ ಮಾಡುವಷ್ಟು ಇದು ಹರಡುವುದಿಲ್ಲ. ಒಮಿಕ್ರಾನ್ ಕೆಲವು ವಾರಗಳ ಹಿಂದಷ್ಟೆ ಹರಡಲು ಪ್ರಾರಂಭವಾಗಿದೆ. ಇದರಿಂದ ಹೊಸ ರೂಪಾಂತರಿ ಸೃಷ್ಟಿಯಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ.