ಬೆಂಗಳೂರು: ಕೋವಿಡ್‌ನಿಂದ ಕುಂಠಿತವಾದ ಶೈಕಣಿಕ ವರ್ಷವನ್ನು ಸರಿದೂಗಿಸಲು ಬೇಸಿಗೆ ರಜೆಯನ್ನು ಕಡಿತಗೊಳಿಸಿ, 2022-23 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ವಿಸ್ತರಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪ್ರತಿವರ್ಷ ಶೈಕ್ಷಣಿಕ ವರ್ಷ ಮೇ 29 – ಏಪ್ರಿಲ್ 10ಕ್ಕೆ ಮುಕ್ತಾಯಗೊಳ್ಳುತ್ತಿತ್ತು. 10 ತಿಂಗಳ ಶೈಕ್ಷಣಿಕ ಅವಧಿಯಲ್ಲಿ ಕನಿಷ್ಠ 220 ದಿನಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಿಗುತ್ತಿದ್ದವು. ಆದರೆ ಕೋವಿಡ್ ನಿಂದಾಗಿ ಭೌತಿಕ ತರಗತಿಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಕೊರತೆ ಉಂಟಾಗಿದೆ. ಈ ಕೊರತೆಯನ್ನು ಸರಿದೂಗಿಸಲು ಬೇಸಿಗೆ ರಜೆಯನ್ನು ಕಡಿತಗೊಳಿಸುವಂತೆ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
2021-22 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಎಪ್ರಿಲ್ 9ಕ್ಕೆ ಮುಕ್ತಾಯಗೊಳಿಸಿ ಮುಂಬರುವ ಶೈಕ್ಷಣಿಕ ವರ್ಷವನ್ನು ಮೇ 16 ರಿಂದ ಪ್ರಾರಂಭಿಸಲು ನಿರ್ಧರಿಸಿದೆ. ಜೊತೆಗೆ ಎಪ್ರಿಲ್ 10 ರಿಂದ ಮೇ 15 ರ ವರೆಗೆ ಬೇಸಿಗೆ ರಜೆ ನೀಡಲು ನಿರ್ಧರಿಸಿದೆ.