ಕೊರೊನಾವೈರಸ್ನ ಹೊಸ ರೂಪಾಂತರವಾದ ಓಮಿಕ್ರಾನ್ನ ಲಕ್ಷಣಗಳು ಡೆಲ್ಟಾ ರೂಪಾಂತರಕ್ಕಿಂತಲೂ ಬೇಗನೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಧ್ವನಿ ಮೂಲಕವೂ ಓಮಿಕ್ರಾನ್ನ ಮೊದಲ ರೋಗಲಕ್ಷಣವನ್ನು ಕಂಡುಹಿಡಿಯಬಹುದಾಗಿದೆ. ಓಮಿಕ್ರಾನ್ ಸೋಂಕಿಗೆ ನೀವು ತುತ್ತಾಗುವ ಮೊದಲು ನಿಮ್ಮ ದೇಹದಲ್ಲಿ ಅದರ ಲಕ್ಷಣಗಳು ಕಂಡುಬರುತ್ತವೆ.
ದಿ ಸನ್ನಲ್ಲಿ ಪ್ರಕಟವಾದ ವರದಿಯ ಅನುಸಾರ ಒಂದು ವೇಳೆ ನೀವು ಓಮಿಕ್ರಾನ್ ಸೋಂಕಿಗೆ ತುತ್ತಾದಲ್ಲಿ ಗಂಟಲು ನೋವು, ಜೋರಾಗಿ ಮಾತನಾಡಲು ಅಥವಾ ಕಿರುಚಲು ಸಾಧ್ಯವಾಗದೇ ಇರುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಮಿಕ್ರಾನ್ ಈ ಲಕ್ಷಣಗಳು ಡೆಲ್ಟಾ ರೂಪಾಂತರಕ್ಕಿಂತ ಭಿನ್ನವಾಗಿದೆ.
ತಜ್ಞರ ಪ್ರಕಾರ, ಓಮಿಕ್ರಾನ್ನ ಲಕ್ಷಣಗಳಲ್ಲಿ ಮೊದಲನೆಯದಾಗಿ ಗಂಟಲಲ್ಲಿ ತುರಿಕೆ ಹಾಗೂ ಗಂಟಲಿನ ಒಳಗಿಂದ ಚುಚ್ಚಿದಂತೆ ಆಗುವುದು. ಡೆಲ್ಟಾ ರೂಪಾಂತರ ಸೋಂಕಿಗೆ ತುತ್ತಾದ ಹೆಚ್ಚಿನ ಜನರಲ್ಲಿ ಗಂಟಲು ನೋವಿನ ಸಮಸ್ಯೆ ಸಾಮಾನ್ಯವಾಗಿತ್ತು. ಓಮಿಕ್ರಾನ್ ಸೋಂಕಿಗೆ ಒಳಗಾದವರು ಮೂಗಿನ ದಟ್ಟಣೆ, ಒಣ ಕೆಮ್ಮು ಮತ್ತು ಬೆನ್ನುನೋವಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಡಿಸ್ಕವರಿ ಹೆಲ್ತ್ನ ಮುಖ್ಯ ಕಾರ್ಯನಿರ್ವಾಹಕ ರಯಾನ್ ರೋಚ್ ತಿಳಿಸಿದ್ದಾರೆ.
ಕೆಲವು ವರದಿಯ ಪ್ರಕಾರ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಕಡಿಮೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಒಮಿಕ್ರಾನ್ ರೂಪಾಂತರದ ಲಕ್ಷಣಗಳು ದೇಹದಲ್ಲಿ ಕಂಡುಬಂದಲ್ಲಿ ಕಡೆಗಣಿಸದೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ.