ಕಾರ್ಕಳ: ಕಾರ್ಕಳ ಉತ್ಸವದ ಪ್ರಯುಕ್ತ ಶ್ವಾನ ಪ್ರದರ್ಶನವನ್ನು ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿಲಾಗಿತ್ತು.
ಶ್ವಾನ ಪ್ರದರ್ಶವನ್ನು ವೀರಾಂಜನ್ ಜೈನ್ ಉದ್ಘಾಟಿಸಿದರು. ಸೋಲೂರು ಮಠದೀಶಾರಾದ ಬಲ್ಯೊಟ್ಟು ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು.


ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ನಾಯಿಗಳನ್ನು ಶ್ವಾನ ಮಾಲಕರು ಶೃಂಗಾರ ಮಾಡಿ ತಂದಿದ್ದರು. ಆಯೋಜಕರು ಸರದಿ ಪ್ರಕಾರ ಕರೆಯುತ್ತಿದ್ದಂತೆ ಸಾಕು ಶ್ವಾನಗಳನ್ನ ವೇದಿಕೆಗೆ ಕರೆತಂದು ಪ್ರದರ್ಶಿಸಲಾಯಿತು. ಪ್ರದರ್ಶನದಲ್ಲಿ ಕೇವಲ ಸ್ವದೇಶಿ ತಳಿಯ ಶ್ವಾನಗಳಷ್ಟೇ ಅಲ್ಲದೇ ಕೆಲ ವಿದೇಶಿ ತಳಿಯ ಶ್ವಾನಗಳನ್ನು ಪ್ರದರ್ಶನಕ್ಕೆ ಕರೆತರಲಾಗಿತ್ತು.


ಪ್ರದರ್ಶನದಲ್ಲಿ ಸುಮಾರು 28 ತಳಿಯ 125 ಶ್ವಾನಗಳು ಭಾಗವಹಿಸಿದ್ದವು. ಸ್ವದೇಶಿ ತಳಿಯ ಸೈಬೀರಿಯನ್ ಹಸ್ಕಿ, ಟಿಬೇಟಿಯನ್ ಮಸ್ಕಿಫ್, ಮುಧೋಳ ಶ್ವಾನಗಳು, ವಿದೇಶಿ ತಳಿಯ ಜರ್ಮನ್ ಶೆಫರ್ಡ್, ಡಾಬರ್ ಮನ್, ಬಾಕ್ಸರ್, ಲಾಪ್ಸಸೋ, ಪಾಮೋರಿಯನ್, ಲ್ಯಾಬರ್ ಡಾರ್, ಪಗ್, ಅಕಿಟ ಬೀಗಲ್, ರಾಟ್ ವೀಲರ್, ಗ್ರೇಟ್ ಡೇನ್ ಸೇರಿದಂತೆ ಅಪರೂಪದ ತಳಿಗಳಾದ ಚೌಚ್, ಫ್ರೆಂಚ್ ಬುಲ್ ಡಾಗ್ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.