Sunday, June 8, 2025

ಕಾರವಾರದ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಡಾಲ್ಫಿನ್ ಕಳೇಬರ ಪತ್ತೆ

ಉತ್ತರ ಕನ್ನಡ: ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅರಬ್ಬೀ ಸಮುದ್ರ ತೀರದಲ್ಲಿ ಒಂದೇ ದಿನ ಎರಡು ಡಾಲ್ಫಿನ್ ಕಳೇಬರಗಳು ಪತ್ತೆಯಾಗಿವೆ. ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಮೊದಲ ಬಾರಿಗೆ ಅಪರೂಪದ ಇಂಡೋ ಫೆಸಿಪಿಕ್ ಫಿನ್‌ಲೆಸ್ ಪೊರ್‌ಪೊಯ್ಸ್ ಪ್ರಭೇದದ ಡಾಲ್ಫಿನ್ ಪತ್ತೆಯಾಗಿದ್ದು ಇದು ಹೆಣ್ಣು ಡಾಲ್ಫಿನ್ ಮರಿಯಾಗಿದೆ.


ಹೆಚ್ಚಾಗಿ ಏಷ್ಯಾ, ಇಂಡೋನೇಷ್ಯಾ, ಮಲೇಶಿಯಾ, ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಕಾಣಸಿಗುವ ಡಾಲ್ಫಿನ್ ಪ್ರಭೇದ ಇದಾಗಿದ್ದು, ಅರಬ್ಬೀ ಸಮುದ್ರ ಭಾಗದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಸಮುದ್ರದಲ್ಲಿ ಈಜುವ ವೇಳೆ ಬೋಟಿಗೆ ತಾಗಿ ಹೊಡೆತದಿಂದ ಆಂತರಿಕ ರಕ್ತಸ್ರಾವವಾಗಿ ಉಸಿರುಗಟ್ಟಿ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.


ನಗರದ ಅಲಿಗದ್ದಾ ಕಡಲತೀರದಲ್ಲಿ ಪತ್ತೆಯಾದ ಇನ್ನೊಂದು ಕಳೇಬರ ಸಹ ಹೆಣ್ಣು ಡಾಲ್ಫಿನ್‌ನದ್ದಾಗಿದ್ದು, ಸುಮಾರು 2.5ಮೀಟರ್‌ಗಳಷ್ಟು ಉದ್ದವಿದೆ. ಇದು ಇಂಡೋ ಪೆಸಿಫಿಕ್ ಹಂಪ್‌ಬ್ಯಾಕ್ ಪ್ರಭೇದದ ಡಾಲ್ಫಿನ್ ಆಗಿದ್ದು, ಮೃತಪಟ್ಟು ಸಾಕಷ್ಟು ದಿನಗಳಾಗಿದ್ದು ಕಳೇಬರ ಕೊಳೆತ ಸ್ಥಿತಿಯಲ್ಲಿದ್ದಿದ್ದರಿಂದ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ಮಾಹಿತಿ ನೀಡಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles