ನವದೆಹಲಿ: ಸಾಮಾನ್ಯವಾಗಿ ದೋಸೆಗೆ ನಾವು ಹಣ ಕೊಟ್ಟು ತಿನ್ನುತ್ತೇವೆ. ಆದರೆ ಡೆಲ್ಲಿ ಟಮ್ಮಿ(delhi_tummy) ಎಂಬ ಇನ್ ಸ್ಟಾಗ್ರಾಂ ಖಾತೆದಾರರು ದೋಸೆ ತಿಂದರೆ 71 ಸಾವಿರ ರೂಪಾಯಿ ಬಹುಮಾನ ನೀಡುತ್ತಿದ್ದಾರೆ.
ದೋಸೆ ತಿಂದರೆ ಹಣ ಕೊಡುತ್ತಾರೆಂದರೆ ಆ ದೋಸೆ ಚೆನ್ನಾಗಿಲ್ಲದೇ ಇರಬಹುದು ಎಂದುಕೊಳ್ಳುವುದಾದರೆ ಅದು ತಪ್ಪು. ದೋಸೆ ರುಚಿಯಾಗಿ ಗರಿಗರಿಯಾಗಿರುತ್ತದೆ. ಈ ದೋಸೆ 10 ಅಡಿಯಷ್ಟು ಉದ್ದವಿದ್ದು, ಈ ದೋಸೆಯನ್ನು ಒಬ್ಬರೇ ಸಂಪೂರ್ಣವಾಗಿ ತಿಂದರೆ ಮಾತ್ರ 71 ಸಾವಿರ ರೂಪಾಯಿ ಬಹುಮಾನ ನೀಡುತ್ತಾರೆ.
ಈ ಬಗ್ಗೆ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ 10 ಅಡಿ ಉದ್ದದ ದೋಸೆ ಮಾಡಿ ಅದಕ್ಕೆ ಎಣ್ಣೆ, ಆಲೂಗಡ್ಡೆ ಪಲ್ಯ, ಕೆಲ ಮಸಾಲೆಗಳ ಜೊತೆಗೆ ಹತ್ತಾರು ಬಗೆಯ ಚಟ್ನಿ, ದೋಸೆ ಮೇಲೆ ಚೀಸ್ ಹಾಕಿ ಸರ್ವ್ ಮಾಡಲಾಗುತ್ತದೆ. ಇವಿಷ್ಟನ್ನು ಸ್ವಲ್ಪವೂ ಬಿಡದೇ ಸಂಪೂರ್ಣವಾಗಿ ತಿನ್ನುವವರಿಗೆ ಮಾತ್ರ ಬಹುಮಾನ ಕೊಡುತ್ತಾರೆ.