Sunday, June 8, 2025

ಮತ್ತೆ ರೋಡಿಗಿಳಿಯಲಿವೆಯಾ ಡಬಲ್ ಡೆಕ್ಕರ್ ಬಸ್ ಗಳು

ಬೆಂಗಳೂರು: ಸುಮಾರು ವರ್ಷಗಳ ಹಿಂದೆ ಡಬಲ್ ಡೆಕ್ಕರ್ ಬಸ್ ಗಳು ನಗರಗಳ ಪ್ರಮುಖ ಆಕರ್ಷಣೆಯಾಗಿತ್ತು. ಬರುಬರುತ್ತಾ ಈ ಬಸ್ ಗಳು ಕಣ್ಮರೆಯಾದವು. ನಮ್ಮ ಹಿರಿಯರು ಈಗಲೂ ಡಬಲ್ ಡೆಕ್ಕರ್ ಬಸ್ ಗಳಲ್ಲಿ ಸಂಚರಿಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ ಬೆಂಗಳೂರು ನಗರಗಳಲ್ಲಿ ಬಿಎಂಟಿಸಿ ಸಂಸ್ಥೆಯು ಡಬಲ್ ಡೆಕ್ಕರ್ ಬಸ್ ಗಳನ್ನು ಮತ್ತೆ ರೋಡಿಗಿಳಿಸಲು ತೀರ್ಮಾನಿಸಿದೆ.

ಈ ಬಾರಿ ಡೀಸಲ್ ಆಧಾರಿತ ಬಸ್ ಗಳ ಬದಲಿಗೆ ಎಲೆಕ್ಟ್ರಿಕ್ ಬಸ್ ಗಳು ಸಂಚರಿಸುತ್ತವೆ ಎನ್ನುವುದು ವಿಶೇಷ. ನಗರದೊಳಗಿನ ರಸ್ತೆಗಳು ಸಣ್ಣದಾಗಿರುವುದರಿಂದ ಡಬಲ್ ಡೆಕ್ಕರ್ ಬಸ್ ಗಳು ಸಂಚಾರಕ್ಕೆ ಕಷ್ಟವಾಗುತ್ತದೆ. ಆದ್ದರಿಂದ ನಗರದ ಹೊರವಲಯದ ರಸ್ತೆಗಳಲ್ಲಿ ಈ ಬಸ್ ಗಳ ಸಂಚಾರ ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ 5 ಬಸ್ ಗಳನ್ನು ಖರೀದಿಸಿ, ಬಸ್ ಗಳ ಸೇವೆ ತೃಪ್ತಿನೀಡಿದಲ್ಲಿ ಹೆಚ್ಚಿನ ಬಸ್ ಗಳನ್ನು ಖರೀದಿಸಲಾಗುತ್ತದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles