ಕಾಪು: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾಪು ಜೆಸಿಐ ವತಿಯಿಂದ ಮಲ್ಲಾರು ಕೊಂಬಗುಡ್ಡೆ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ.ಸುಮಿತ್ರಾ ಪಾಟೀಲ್ ಅವರನ್ನು ಬುಧವಾರ ಸನ್ಮಾನಿಸಿ, ಗೌರವಿಸಲಾಯಿತು.
ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯೊಂದಿಗೆ ಅವಿರತವಾಗಿ ಕರ್ತವ್ಯ ನಿರ್ವಹಿಸಿದ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ವೈದ್ಯಾಧಿಕಾರಿ ಡಾ.ವಿವೇಕ್ ಎಸ್.ಬಿ., ಜೆಸಿಐ ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ, ಮಹಿಳಾ ಜೇಸಿ ಸಂಯೋಜಕಿ ಶ್ರುತಿ ಶೆಟ್ಟಿ, ಪದಾಧಿಕಾರಿಗಳಾದ ಸಾವಿತ್ರಿ ರಮೇಶ್, ಸತ್ಯವತಿ ನಾಗೇಶ್ ಮತ್ತಿತರು ಉಪಸ್ಥಿತರಿದ್ದರು.
ಜೆಸಿಐ ವತಿಯಿಂದ ವೈದ್ಯೆ ಡಾ.ಸುಮಿತ್ರಾ ಪಾಟೀಲ್ಗೆ ಸನ್ಮಾನ
Subscribe
Login
0 Comments