Sunday, June 8, 2025

ಡ್ರೀಮ್‌ ಝೋನ್: ಕಲೆ – ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ

ಉಡುಪಿ: ಸುಮಾರು 30ಕ್ಕೂ ಹೆಚ್ಚಿನ ದೇಶಗಳಲ್ಲಿ ಇಂಟೀರಿಯರ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್, ಫ್ಯಾಷನ್ ಡಿಸೈನಿಂಗ್‌ನಂತಹ ಡಿಸೈನಿಂಗ್ ಶಿಕ್ಷಣ ನೀಡುತ್ತಿರುವ ಡ್ರೀಮ್‌ ಝೋನ್‌ ಸಂಸ್ಥೆಯ ಉಡುಪಿ ಘಟಕದಿಂದ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮವು ಉಡುಪಿಯ ಸಿಟಿ ಬಸ್‌ ಸ್ಟ್ಯಾಂಡ್‌ ಬಳಿಯ ರಾಜ್‌ ಟವರ್ಸ್‌ ನಲ್ಲಿ ಶನಿವಾರ ನಡೆಯಿತು.

ಡ್ರೀಮ್‌ ಝೋನ್‌ ಸಂಸ್ಥೆ ಉಡುಪಿಯ ಸೆಂಟರ್ ಹೆಡ್ ವಿನೋದ್‌ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ತಯಾರಿಸಿದ ಫ್ಯಾಷನ್ ವಸ್ತ್ರಗಳು, ಆಭರಣಗಳು, ಚಿತ್ರಕಲೆ, ಪ್ರಾಜೆಕ್ಟ್‌, ಮಾಡೆಲ್‌ಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles