ಉಡುಪಿ: ಚಿಕನ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಓರ್ವ ಸಾವನ್ನಪ್ಪಿ ಇನ್ನೋರ್ವ ಗಾಯಗೊಂಡ ಘಟನೆ ಬುಧವಾರ ಉಡುಪಿಯ ಪಡುಬಿದ್ರಿಯ ಗಿರಿ ಚಿಕನ್ ಸ್ಟಾಲ್ನಲ್ಲಿ ನಡೆದಿದೆ.
ಮೃತರನ್ನು ಕಂಚಿನಡ್ಕ ನಿವಾಸಿ ಬಶೀರ್(45) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ 2.30ರ ವೇಳೆ ಬಶೀರ್ ಅಂಗಡಿಯಲ್ಲಿ ಕೋಳಿ ಸ್ವಚ್ಛಗೊಳಿಸಲು ಕೋಳಿಯನ್ನು ಮೆಷಿನ್ ಒಳಗೆ ಹಾಕುವ ವೇಳೆ ವಿದ್ಯುತ್ ಅವಘಡ ಉಂಟಾಗಿದೆ.
ಘಟನೆಯಲ್ಲಿ ಕಾರ್ಮಿಕ ಬಶೀರ್ ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಡುಬದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.