ಕೆನಡಾ: ಮಧ್ಯವರ್ತಿಗಳ ಸಲಹೆಯಂತೆ ಕಾನೂನು ಬಾಹಿರವಾಗಿ ಅಮೇರಿಕಾವನ್ನು ಪ್ರವೇಶಿಸುವ ವೇಳೆ ಮೈಕೊರೆಯುವ ಚಳಿಗಾಳಿ ಹಿಮಪಾತಕ್ಕೆ ಸಿಲುಕಿ ಭಾರತದ ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 19ರಂದು ಮ್ಯಾನಿಟೋಬಾ ಸಮೀಪದ ಎಮರ್ಸನ್ ಪ್ರದೇಶದಲ್ಲಿ ಅಮೇರಿಕವನ್ನು ಅಕ್ರಮವಾಗಿ ಗಡಿಭಾಗದ ಮೂಲಕ ಒಳಪ್ರವೇಶಿಸುವ ವೇಳೆ ಮೈನಸ್ 35 ಡಿಗ್ರಿ ಸೆಲ್ಸಿಯಸ್ ಮೈಕೊರೆಯುವ ಚಳಿಯಿಂದಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಜಗದೀಶ್ ಪಟೇಲ್(39ವರ್ಷ), ಪತ್ನಿ ವೈಶಾಲಿ ಪಟೇಲ್(37 ವರ್ಷ), ಮಗಳು ವಿಹಾಂಗಿ(11 ವರ್ಷ), ಮಗ ಧಾರ್ಮಿಕ್(3 ವರ್ಷ) ಗುಜರಾತ್ನ ಕಾಲೋಲ್-ದಿಂಗುಚಾ ಗ್ರಾಮದವರು ಎಂದು ಗುರುತಿಸಲಾಗಿದೆ. 2 ವಾರಗಳ ಹಿಂದೆಯಷ್ಟೇ ವಿಸಿಟಿಂಗ್ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದ ಕುಟುಂಬ ಅಕ್ರಮವಾಗಿ ಅಮೇರಿಕಾವನ್ನು ಪ್ರವೇಶಿಸುವ ವೇಳೆ ಚಳಿಗಾಳಿಗೆ ಸಿಲುಕಿ ಬದುಕನ್ನು ಅಂತ್ಯಗೊಳಿಸಿಕೊಂಡಿದ್ದಾರೆ.