ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡವಷ್ಟೇ ಅಲ್ಲದೆ ಅಭಿಮಾನಿಗಳೂ ಭರ್ಜರಿಯಾಗಿ ಚಿತ್ರದ ಪ್ರಮೋಷನ್ ಅಲ್ಲಿ ನಿರತರಾಗಿದ್ದಾರೆ. ಶುಕ್ರವಾರ ರಿಲೀಸ್ ಆದ ‘ಸಲಾಂ ಸೋಲ್ಜರ್’ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ಅಭಿಮಾನಿಗಳು ಹಾಡಿಗೆ ಫಿದಾ ಆಗಿದ್ದಾರೆ.
ಇತ್ತೀಚೆಗಷ್ಟೇ ಜೇಮ್ಸ್ ಚಿತ್ರದ ‘ಟ್ರೇಡ್ಮಾರ್ಕ್’ ಲಿರಿಕಲ್ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಬಿಡುಗಡೆಯಾದ ಹತ್ತು ದಿನದಲ್ಲೇ 11 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಇಂದು ಬಿಡುಗಡೆಯಾದ ‘ಸಲಾಂ ಸೋಲ್ಜರ್’ ಲಿರಿಕಲ್ ಹಾಡು ಬಿಡುಗಡೆಯಾದ ಒಂದು ಗಂಟೆ ಒಳಗೆ ಒಂದುವರೆ ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.
‘ಪಿಆರ್ಕೆ ಆಡಿಯೋ’ ಮೂಲಕ ಬಿಡುಗಡೆ ಆಗಿರುವ ‘ಸಲಾಂ ಸೋಲ್ಜರ್’ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಸೈನಿಕನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸಿದೆ.