ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಮರಣೋತ್ತರ ಪರೀಕ್ಷೆ ವರದಿ ಸೋಮವಾರ ಹೊರಬಿದ್ದಿದೆ. ಕಿಕ್ರೆಟ್ ದಿಗ್ಗಜ ಶೇನ್ ವಾರ್ನ್ ಸಾವು ಸಹಜ ಸಾವು ಎಂದು ವರದಿ ತಿಳಿಸಿದೆ.
ಶೇನ್ ವಾರ್ನ್ ಅವರ ಸಾವು ಸ್ವಾಭಾವಿಕ ಕಾರಣಕ್ಕಾಗಿದೆ ಎಂದು ಇಂದು ಥೈಲ್ಯಾಂಡ್ ಪೊಲೀಸರು ತಿಳಿಸಿದ್ದಾರೆ. ಫೋರೆನ್ಸಿಕ್ ವೈದ್ಯರ ತಂಡ ಶೇನ್ ವಾರ್ನ್ ಮರಣೋತ್ತರ ಪರೀಕ್ಷೆ ಮಾಡಿ ಈ ನಿರ್ಧಾರಕ್ಕೆ ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದ ಪೊಲೀಸರು ಶೇನ್ ವಾರ್ನ್ ಸಾವಿನ ಸಂಶಯಗಳಿಗೆ ತೆರೆ ಎಳೆದಿದ್ದಾರೆ.