Saturday, June 7, 2025

ಮಾಜಿ ಫುಟ್‌ಬಾಲ್ ಆಟಗಾರ ಸುಭಾಷ್ ಭೌಮಿಕ್ ನಿಧನ

ಕೋಲ್ಕತ್ತಾ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಫುಟ್‌ಬಾಲ್ ಆಟಗಾರ ಸುಭಾಷ್ ಭೌಮಿಕ್(72) ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. ಈ ಕುರಿತು ಅವರ ಕುಟುಂಬಸ್ಥರು ಮಾಹಿತಿಯನ್ನು ನೀಡಿದ್ದು, ಅವರು ಬಹಳ ಸಮಯದಿಂದ ಕಿಡ್ನಿ ವೈಫಲ್ಯ ಹಾಗೂ ಮಧುಮೇಹ ತೊಂದರೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.


ಸುಭಾಷ್ ಭೌಮಿಕ್ ಅವರಿಗೆ 23ವರ್ಷದ ಮುಂಚೆ ಬೈಪಾಸ್ ಸರ್ಜರಿಯನ್ನು ಮಾಡಲಾಗಿತ್ತು, ಅಲ್ಲದೇ ಕಳೆದ ಮೂರುವರೆ ತಿಂಗಳಿನಿಂದ ಪ್ರತಿ ನಿತ್ಯ ಡಯಾಲಿಸಿಸ್‌ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಇತ್ತೀಚೆಗೆ ಅವರು ಹೃದಯ ರೋಗಕ್ಕೆ ಸಂಬಂಧಿಸಿದಂತೆ ಏಕ್‌ಬಲ್‌ಪುರ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಇಂದು ಮುಂಜಾನೆ ಮಾಜಿ ಆಟಗಾರ ಕೊನೆಯುಸಿರೆಳೆದಿದ್ದಾರೆ.


ಸುಭಾಷ್ ಭೌಮಿಕ್ ಅವರು ಭಾರತದ ಫುಟ್‌ಬಾಲ್ ತಂಡದ ಮಿಡ್‌ಫೀಲ್ಡರ್ ಆಗಿದ್ದರು. 1970ರ ಏಷಿಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಇವರೂ ಒಬ್ಬರಾಗಿದ್ದರು. ಫುಟ್‌ಬಾಲ್ ಆಟದಿಂದ ನಿವೃತ್ತಿಯನ್ನು ಪಡೆದ ಬಳಿಕ ಫುಟ್‌ಬಾಲ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 2003ರಲ್ಲಿ ಇವರು ತರಬೇತುದಾರರಾಗಿದ್ದ ಈಸ್ಟ್ ಬೆಂಗಾಲ್ ಫುಟ್‌ಬಾಲ್ ತಂಡ ಏಷಿಯನ್ ಕಪ್‌ನ್ನು ತನ್ನ ಮುಡಿಗೇರಿಸಿಕೊಂಡಿತ್ತು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles