ನವದೆಹಲಿ: ಮಾಜಿ ಕುಸ್ತಿಪಟು ದಿ ಗ್ರೇಟ್ ಖಲಿ ಅವರು ಗುರುವಾರ ಬಿಜೆಪಿ (ಭಾರತೀಯ ಜನತಾ ಪಕ್ಷ) ಗೆ ಸೇರಿದ್ದು ಇವರನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿದರು.
ಖಲಿ ಬಿಜೆಪಿ ಸೇರಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ “ಪಕ್ಷದ ಸಿದ್ಧಾಂತಗಳಿಂದ ನಾನು ಸ್ಫೂರ್ತಿ ಪಡೆದಿರುವ ಕಾರಣ ಬಿಜೆಪಿ ಸೇರಿದ್ದೇನೆ. ಪ್ರದಾನಿ ಮೋದಿ ಅವರು ದೇಶಕ್ಕಾಗಿ ಮಾಡುತ್ತಿರುವ ಕೆಲಸವನ್ನು ನಾನು ಮೆಚ್ಚುತ್ತೇನೆ. ಪಕ್ಷದ ಸಿದ್ಧಾಂತವು ಭಾರತದ ಬೆಳವಣಿಯ ಗುರಿಯನ್ನು ಹೊಂದಿದೆ. ನಾನು ಪಕ್ಷದ ಮಾನದಂಡಗಳಿಗೆ ಅನುಗುಣವಾಗಿ ಬದುಕುತ್ತೇನೆಂದು ಖಲಿ ಹೇಳಿದರು.