ನವದೆಹಲಿ: ಆಸ್ಟ್ರೇಲಿಯಾದ ಶ್ರೇಷ್ಟ ಸ್ಪಿನ್ನರ್ ಶೇನ್ ವಾರ್ನ್ ಸಾವಿನ ಬಳಿಕ ಅನೇಕ ಕ್ರಿಕೇಟಿಗರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿ, ಅವರ ಬೌಲಿಂಗ್ ಬಗ್ಗೆ ಮೆಲುಕು ಹಾಕಿದ್ದಾರೆ. ಆದರೆ ಶೇನ್ ಬೌಲಿಂಗ್ ಬಗ್ಗೆ ಗವಾಸ್ಕರ್ ಟೀಕೆ ಮಾಡಿದ್ದು, ಅವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇನ್ ವಾರ್ನ್ ಆರ್ಡಿನರಿ ಸ್ಪಿನ್ನರ್, ಭಾರತದ ವಿರುದ್ಧ ಶೇನ್ ವಾರ್ನ್ ಉತ್ತಮ ದಾಖಲೆ ಹೊಂದಿಲ್ಲ. ಶೇನ್ ವಾರ್ನ್ ಅವರಿಗಿಂತ ಮುತ್ತಯ್ಯ ಮುರುಳಿಧರನ್ ಹಾಗೂ ಭಾರತೀಯ ಸ್ಪಿನ್ನರ್ಗಳು ಉತ್ತಮ ದಾಖಲೆ ಹೊಂದಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ. ಇವರ ಈ ಹೇಳಿಕೆಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇನ್ ವಾರ್ನ್ ಸಾವಿನ ಬಳಿಕ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳು ಟೀಕೆ ಮಾಡಿವೆ.