ದೆಹಲಿ: ಭಾರತದಲ್ಲಿ ಕೊರೊನಾ ಮೂರನೇ ಅಲೆಯ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಲಸಿಕೆ ವಿತರಣೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಇದೀಗ ಕರ್ನಾಟಕ ಸರ್ಕಾರವು ಕೊವಿಡ್ ಪರೀಕ್ಷಾ ವರದಿಯನ್ನು ನೋಡಲು ಮತ್ತು ವರದಿಯನ್ನು ಮುದ್ರಿಸಲು ಅಧಿಕೃತವಾಗಿ ವೆಬ್ಸೈಟ್ ಬಿಡುಗಡೆ ಮಾಡಿದೆ. ಕೊವಿಡ್ ಪರೀಕ್ಷಾ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದ ಯುಆರ್ಎಲ್ ಬಳಸಿ ಮನೆಯಲ್ಲಿಯೇ ಕುಳಿತು ನೋಡಬಹುದು. ಇದರಲ್ಲಿ ಪರೀಕ್ಷಾ ವರದಿಯನ್ನು ಡೌನ್ಲೋಡ್ ಮಾಡವ ಅವಕಾಶ ಇದೆ.
http://covid.karnataka.gov.in/service1 ಈ ಯುಆರ್ಎಲ್ ಬಳಸಿಕೊಂಡು ಕೋವಿಡ್ ಪರೀಕ್ಷಾ ವರದಿಯನ್ನು ನೋಡಬಹುದು ಹಾಗೂ ಡೌನ್ಲೋಡ್ ಕೂಡ ಮಾಡಬಹುದು. ಈ ವೆಬ್ಸೈಟ್ ಕರ್ನಾಟಕ ರಾಜ್ಯ ಕೊವಿಡ್ ವಾರ್ ರೂಮ್ ಹೆಸರಿನಲ್ಲಿ ಇದೆ. ಈ ವೆಬ್ಸೈಟ್ ನಲ್ಲಿ ಮೊಬೈಲ್ ನಂಬರ್, 13 ಡಿಜಿಟ್ನ ಎಸ್ಆರ್ಎಫ್ ಐಡಿ ಹಾಕಿದರೆ ಪರೀಕ್ಷಿಸಿದ ಲ್ಯಾಬ್ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್ಗೆ ಅಪ್ಲೋಡ್ ಮಾಡಿದ ನಂತರ ಕೊವಿಡ್ ಪರೀಕ್ಷಾ ವರದಿಯು ಲಭ್ಯವಾಗುತ್ತದೆ.
ಕೊವಿಡ್ ವಾರಿಯರ್ಸ್, ಹೆಲ್ತ್ ವರ್ಕರ್ಸ್ಗೆ, 60 ವರ್ಷದ ಮೇಲ್ಪಟ್ಟವರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು https://selfregistration.cowin.gov.in/ ಈ ವೆಬ್ಸೈಟ್ ಪಡೆಯಬಹುದಾಗಿದೆ. ಈ ಯುಆರ್ಎಲ್ಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬೂಸ್ಟರ್ ಲಸಿಕೆ ಪಡೆಯಲು ಎಷ್ಟು ದಿನಗಳು ಉಳಿದಿವೆ ಎಂಬುದನ್ನು ತಿಳಿಯಬಹುದಾಗಿದೆ.