ಪಾಲಾಕ್ ಸೊಪ್ಪಿನ ಪಪ್ಪು ಅಥವಾ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು:
- ತೊಗರಿಬೇಳೆ ಅರ್ಧ ಕಪ್
- 1 ಕಪ್ ಹೆಚ್ಚಿದ ಪಾಲಾಕ್ ಸೊಪ್ಪು
- ಹೆಚ್ಚಿದ ಟೊಮೆಟೊ ಮುಕ್ಕಾಲು ಕಪ್
- ಹಸಿಮೆಣಸು 4
- ಸಣ್ಣಗೆ ಹೆಚ್ಚಿದ ಈರುಳ್ಳಿ 1
- ಕೊತ್ತಂಬರಿ ಸೊಪ್ಪು 2 ಚಮಚ
- ಬೆಳ್ಳುಳ್ಳಿ 10 ಎಸಳು
- ಕರಿಬೇವಿನ ಎಲೆಗಳು 10
- ಸಾಂಬಾರ್ ಪುಡಿ ಒಂದುವರೆ ಚಮಚ (ಸಾಂಬಾರ್ ಪುಡಿ ಬದಲು ಖಾರದ ಪುಡಿಯನ್ನೂ ಬಳಸಿಕೊಳ್ಳಬಹುದು)
- ರುಚಿಗೆ ತಕ್ಕಷ್ಟು ಉಪ್ಪು
- ಅರಶಿನ ಚಿಟಿಕೆ
- 1 ಚಮಚ ಎಣ್ಣೆ
- 1 ಚಮಚ ಜೀರಿಗೆ ಪುಡಿ ಅಥವಾ ಜೀರಿಗೆ
ಪಾಲಾಕ್ ಸೊಪ್ಪಿನ ಪಪ್ಪು ಮಾಡುವ ವಿಧಾನ:
ಮೊದಲಿಗೆ ಒಂದು ಕುಕ್ಕರ್ ಗೆ ಅರ್ಧ ಕಪ್ ತೊಗರಿಬೇಳೆಯನ್ನು ತೊಳೆದು ಹಾಕಿ. (ಇದರೊಂದಿಗೆ ಸ್ವಲ್ಪ ಹೆಸರುಬೇಳೆಯನ್ನು ಹಾಕಿಕೊಳ್ಳಬಹುದು). ನಂತರ ಇದಕ್ಕೆ ಹೆಚ್ಚಿದ ಟೊಮೆಟೊ ಮುಕ್ಕಾಲು ಕಪ್, ಉದ್ದಕ್ಕೆ ಸೀಳಿದ ಹಸಿಮೆಣಸು 4, ಸಣ್ಣಗೆ ಹೆಚ್ಚಿದ ಈರುಳ್ಳಿ 1, ಕೊತ್ತಂಬರಿ ಸೊಪ್ಪು 2 ಚಮಚ, ಬೆಳ್ಳುಳ್ಳಿ 10 ಎಸಳು, ಕರಿಬೇವಿನ ಎಲೆಗಳು 10, ಸಾಂಬಾರ್ ಪುಡಿ ಒಂದುವರೆ ಚಮಚ, ಚಿಟಿಕೆ ಅರಶಿನ ಹಾಗೂ 3 ರಿಂದ 4 ಕಪ್ ನೀರು ಹಾಕಿ.
ನಂತರ ಕುಕ್ಕರ್ ಗೆ 1 ಚಮಚ ಜೀರಿಗೆ ಅಥವಾ ಇಂದು ಚಮಚ ಜೀರಿಗೆ ಪುಡಿ, ಒಂದು ಚಮಚ ಎಣ್ಣೆ ಹಾಗಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದರ ಮೇಲೆ 1 ಕಪ್ ಹೆಚ್ಚಿದ ಪಾಲಾಕ್ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ 3 ರಿಂದ 4 ಕೂಗು ಕೂಗಿಸಿ.
3 ಕೂಗು ಕೂಗಿದ ನಂತರ ಮುಚ್ಚುಳ ತೆಗೆದು ಅಗತ್ಯವಿರುವಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ ಚೆನ್ನಾಗಿ ಸ್ಮಾಷ್ ಮಾಡಿಕೊಳ್ಳಿ.
ನಂತರ ಒಂದು ಪಾನ್ ಗೆ 1 ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಅದಕ್ಕೆ ಸಾಸಿವೆ 1 ಚಮಚ, ಜೀರಿಗೆ 1 ಚಮಚ, ಕರಿಬೇವಿನ ಎಲೆ 10, ಸಣ್ಣಗೆ ತುಂಡುಮಾಡಿಕೊಂಡ 2 ಒಣಮೆಣಸಿನ ಕಾಯಿ, ಬೆಳ್ಳುಳ್ಳಿ 3 ಎಸಳು ಹಾಗೇ ಚಿಟಿಕೆ ಇಂಗು ಹಾಕಿ ಒಗ್ಗರಣೆ ಮಾಡಿ ಇದನ್ನು ಪಪ್ಪು ಅಥವಾ ಸಾಂಬಾರ್ ಗೆ ಹಾಕಿದರೆ ಪಾಲಾಕ್ ಪಪ್ಪು ಅಥವಾ ಸಾಂಬಾರ್ ತಯಾರಾಗುತ್ತದೆ.