ನವದೆಹಲಿ: ಮಂಡ್ಯದ ಕಾಲೇಜೊಂದರಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ಮುಸ್ಕಾನ್ ಖಾನ್ ಎಂಬ ವಿದ್ಯಾರ್ಥಿನಿಯ ಹೆಸರಿನಲ್ಲಿ ನೂರಾರು ನಕಲಿ ಟ್ವಿಟರ್ ಖಾತೆಗಳು ಪಾಕಿಸ್ತಾನದಲ್ಲಿ ಸೃಷ್ಟಿಯಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈ ಮೂಲಕ ಕರ್ನಾಟಕದಲ್ಲಾಗುತ್ತಿರುವ ಹಿಜಾಬ್ ಪ್ರತಿಭಟನೆಗೆ ಪಾಕಿಸ್ತಾನ ಕೂಡ ಮಧ್ಯಪ್ರವೇಶಿಸಿದೆ.
ಮುಸ್ಕಾನ್ ಖಾನ್ ಹೆಸರಿನ ನಕಲಿ ಖಾತೆಗಳಲ್ಲಿ ಸಮುದಾಯಗಳನ್ನು ಒಡೆಯುವ ದ್ವೇಷದ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಖಾತೆಯು ಕೆಲ ದಿನಗಳ ಹಿಂದೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇತ್ತೀಚೆಗೆ ಅದು ಕರ್ನಾಟಕದಿಂದ ಕಾರ್ಯನಿರ್ವಹಿಸುತ್ತಿದೆ. ಈ ಖಾತೆ ಸೃಷ್ಟಿಯಾದ ಕೆಲವೇ ದಿನಗಳಲ್ಲಿ 5 ಸಾವಿರ ಫಾಲೋವರ್‌ಗಳು ಸೇರ್ಪಡೆಯಾಗಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಮುಸ್ಕಾನ್ ಹೆಸರಿನಲ್ಲಿರುವ ಮತ್ತೊಂದು ಟ್ವಿಟರ್ ಖಾತೆ 2017ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು, ಈ ಖಾತೆಗೆ 37,000 ಫಾಲೋವರ್‌ಗಳಿದ್ದಾರೆ. ಕರ್ನಾಟಕದಲ್ಲಿ ಹಿಬಾಬ್ ವಿವಾದ ಪ್ರಾರಂಭವಾಗುತ್ತಿದ್ದಂತೆ ಆ ಖಾತೆಯಲ್ಲಿದ್ದ ಟ್ವೀಟ್‌ಗಳನ್ನು ಡಿಲೀಟ್ ಮಾಡಿರುವುದು ಇನ್ನಷ್ಟು ಅನುಮಾನ ಸೃಷ್ಟಿಸಿದೆ.