ನವದೆಹಲಿ: ಮುಂಬಯಿ ಇಂಡಿಯನ್ಸ್ ತಂಡದ ಮಾಜಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್‌ನಲ್ಲಿ ಅಹಮದಾಬಾದ್ ತಂಡದಲ್ಲಿ ಆಡಲಿದ್ದು, ಆಲ್‌ರೌಂಡರ್ ಆಗಿ ಆಡುವ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿರುವ ಅವರು, ನಾನು ಬೌಲಿಂಗ್ ಮಾಡುವ ಕುರಿತು ಎಲ್ಲರಿಗೂ ಕುತೂಹಲವಿದೆ. ಈ ಬಗ್ಗೆ ನಮ್ಮ ತಂಡಕ್ಕೆ ಸರಿಯಾದ ಮಾಹಿತಿ ಇದೆ. ನಾನು ಕೇವಲ ಬ್ಯಾಟರ್ ಆಗುವುದಕ್ಕಿಂತ ಆಲ್‌ರೌಂಡರ್ ಆಗಿ ಆಡಲು ಬಯಸುತ್ತೇನೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದರು.
ಮುಂದುವರಿದು, ನಾನು ಯಾವಾಗಲೂ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ, ಆದರೆ ನನ್ನಿಂದ ಇದು ಸಾಧ್ಯವಾಗದಿದ್ದರೆ ಬ್ಯಾಟರ್ ಆಗಿ ಮುಂದುವರಿಯುತ್ತೇನೆ. ನನಗೆ ಜವಾಬ್ದಾರಿ ತೆಗೆದುಕೊಳ್ಳುವುದು ಎಂದರೆ ಬಹಳ ಇಷ್ಟ. ಅಹಮದಾಬಾದ್ ತಂಡದ ನಾಯಕನಾಗಿ ಪ್ರತಿಯೊಬ್ಬರಿಗೆ ಆಡಲು ಸಮಾನ ಅವಕಾಶವನ್ನು ನೀಡುತ್ತೇನೆ. ನಾನು ಸವಾಲನ್ನು ಎದುರು ನೋಡುತ್ತಿದ್ದೇನೆ ಎಂದರು.