Saturday, June 7, 2025

ಉತ್ತರ ಕೊರಿಯಾದಲ್ಲಿದೆ ಪ್ರಪಂಚದಲ್ಲೆಲ್ಲೂ ಇರದ ವಿಚಿತ್ರ ಕೆಲಸಗಳು

ಉತ್ತರ ಕೊರಿಯಾ ಎಂದಾಕ್ಷಣ ನೆನಪಾಗುವುದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಈ ದೇಶದಲ್ಲಿ ಇವರು ಮಾಡಿದ್ದೇ ಕಾನೂನು. ಇವರು ಮಾಡಿದ ನಿಯಮಗಳನ್ನು ಯಾರೂ ಕೂಡ ಮೀರಬಾರದು. ಒಂದು ವೇಳೆ ಮೀರಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಉತ್ತರ ಕೊರಿಯಾ ಜನರಿಗೆ ತಾವು ಇಷ್ಟ ಪಟ್ಟ ಹಾಗೆ ಬದುಕುವ ಸ್ವಾತಂತ್ರ್ಯವಿಲ್ಲ. ಜನರು ನಿಯಮಗಳನ್ನು ಪಾಲಿಸುತ್ತಾರೋ ಇಲ್ಲವೋ ಎಂದು ಗಮನಿಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಕೆಲಸಗಳು ಮಾತ್ರ ಚಿತ್ರ ವಿಚಿತ್ರವಾಗಿದೆ.

  • ಉತ್ತರ ಕೊರಿಯಾದಲ್ಲಿ ಟ್ರಾಫಿಕ್ ಲೇಡಿ ಎಂಬ ಹುದ್ದೆ ಇದ್ದು, ಈ ಹುದ್ದೆಗೆ ಕೇವಲ ಸುಂದರವಾದ ಯುವತಿಯರಷ್ಟೇ ಅರ್ಹರು. ಇದು ಉತ್ತರ ಕೊರಿಯಾದ ಅತ್ಯಂತ ಗೌರವಯುತವಾದ ಹುದ್ದೆಯಾಗಿದ್ದು, ಈ ಹುದ್ದೆಗೆ ಸ್ವತಃ ಕಿಮ್ ಅವರೆ ಯುವತಿಯರನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ 22 ರಿಂದ 24 ವರ್ಷ ಇರುವಾಗ ಕೆಲಸಕ್ಕೆ ಸೇರುತ್ತೇವೆ. ಆದರೆ ಈ ಟ್ರಾಫಿಕ್ ಲೇಡಿ ಹುದ್ದೆಗೆ ಸೇರುವ ಯುವತಿಯರು 24 ವರ್ಷಕ್ಕೆ ನಿವೃತ್ತಿ ಹೊಂದುತ್ತಾರೆ. ಇವರು 16 ವರ್ಷದವರಿರುವಾಗಲೇ ಕೆಲಸಕ್ಕೆ ಸೇರಿರುತ್ತಾರೆ. ಈ ಯುವತಿಯರಿಗೆ ಕಠಿಣ ಕ್ರಮಗಳನ್ನು ವಿಧಿಸಲಾಗಿರುತ್ತದೆ. ಹಾಗೂ ಇವರು ತುಂಬಾ ಫ್ಯಾ‍ಷನೇಬಲ್ ಆಗಿರಬೇಕು.
  • ನಮ್ಮ ದೇಶದಲ್ಲಿ ಹಲವಾರು ದೇವರುಗಳ, ರಾಜರುಗಳ, ಸ್ವಾತಂತ್ರ್ಯ ಹೋರಾಟಗಾರರ, ಹಲವಾರು ಗಣ್ಯ ವ್ಯಕ್ತಿಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಹಾಗೂ ಮೂರ್ತಿಗಳನ್ನು ಕೆತ್ತಲು ಅವಕಾಶ ಕೂಡ ಇದೆ. ಆದರೆ ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್, ಅವರ ತಂದೆ ಕಿಮ್ ಜಾಂಗ್ ಇಲ್ ಹಾಗೂ ಅವರ ತಾತ ಕಿಮ್ ಇಲ್ ಸಂಗ್ ಕೇವಲ ಈ ಮೂವರ ಮೂರ್ತಿಗಳನ್ನು ಕೆತ್ತಬಹುದಾಗಿದೆ. ಈ ದೇಶದಲ್ಲಿರುವ 34 ಸಾವಿರ ಮೂರ್ತಿಗಳಷ್ಟು ಕಿಮ್ ಮನೆತನದವರದ್ದೇ ಆಗಿದೆ.
  • ಸಾಮಾನ್ಯವಾಗಿ ನಾವು ಅಕ್ಕಿಯಲ್ಲಿರುವ ಕಲ್ಲು, ಭತ್ತ ಹಾಗೇ ಇತರ ಕಸಗಳನ್ನು ಆರಿಸಿ ತೆಗೆಯುತ್ತೇವೆ. ಆದರೆ ಉತ್ತರ ಕೊರಿಯಾದ ರಾಜ ಮನೆತನದವರಿಗೆ ಉತ್ತಮವಾದ ಅಕ್ಕಿಕಾಳುಗಳನ್ನು ಒಂದೊಂದಾಗಿ ಆರಿಸಿ ತೆಗೆಯುವ ಕೆಲಸವಿದೆ.
  • ಉತ್ತರ ಕೊರಿಯಾದಲ್ಲಿ ಫ್ಯಾಷನ್ ಪೊಲೀಸ್ ಎಂಬ ಹುದ್ದೆ ಇದ್ದು, ಈ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಜನರ ಡ್ರೆಸ್ಸಿಂಗ್ ವಿಧಾನ, ಫ್ಯಾಷನ್, ಹೇರ್ ಸ್ಟೈಲ್, ಇವುಗಳನ್ನು ಗಮನಿಸಬೇಕು. ಹಾಗೇ ಜೀನ್ಸ್ ಪ್ಯಾಂಟ್ಅನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಮೀರಿದವರಿಗೆ ಶಿಕ್ಷೆ ಕೊಡಿಸುವ ಜವಬ್ದಾರಿ ಈ ಫ್ಯಾಷನ್ ಪೊಲೀಸರದ್ದಾಗಿರುತ್ತದೆ. ಈ ನಿಯಮಗಳಂತೆ ನಡೆದುಕೊಳ್ಳದೇ ಇದ್ದಲ್ಲಿ ಅಂತಹವರನ್ನು ಲೇಬರ್ ಕ್ಯಾಂಪ್ ಗಳಿಗೆ ಕಳುಹಿಸಿ ನರಕ ದರ್ಶನ ಮಾಡಿಸುತ್ತಾರೆ.
  • ಉತ್ತರ ಕೊರಿಯಾದಲ್ಲಿ ಕಿಮ್ ಅವರು ಕಲ್ಲನ್ನು ಪಾಲಿಶ್ ಮಾಡುವ ಕೆಲಸ ಎಂದರೆ ಸ್ಟೋನ್ ಲೇಡಿ ಎಂಬ ಹುದ್ದೆ ನೀಡಿದ್ದಾರೆ.
Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles