ಮಂಗಳೂರು: ಕಂಕನಾಡಿಯ ಬೈಪಾಸ್ ರಸ್ತೆಯ ಬಳಿಯಲ್ಲಿರುವ ಸಿಟಿ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಮೇ 20ರಿಂದ ಜೂನ್ 5ರವರೆಗೆ ನಡೆಯಲಿರುವ ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್ ಅನ್ನು ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಉದ್ಘಾಟಿಸಿ, ಶುಭ ಹಾರೈಸಿದರು.
ವೆಡ್ಡಿಂಗ್ ವಿಂಟೇಜ್ ಪ್ರೀಮಿಯಂ ಆಂಟಿಕ್ ಕಲೆಕ್ಷನನ್ನು ಬಿ ಹೂಮನ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಸಫಿಯಾ ಮುಹಮ್ಮದ್, ಡಾ. ಆಫ್ರಾ (ಸಿಮೆಂಟ್ಸ್ ಸೇಲ್ಸ್ ಕಾರ್ಪೊರೇಷನ್) ಸಿಟಿ ಗೋಲ್ಡ್ ಮಂಗಳೂರು ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ, ವಜ್ರಾಭರಣ ಖರೀದಿಸಿದ ಪ್ರಥಮ ಗ್ರಾಹಕಿ ಅಮ್ರಾ ಮೊದಲಾದವರು ಉಪಸ್ಥಿತರಿದ್ದರು.
‘ಡೈಮಂಡ್ ಫೆಸ್ಟಿವಲ್’ ಪ್ರಯುಕ್ತ ‘ಆರ್ ಯು ದಿ ಡೈಮಂಡ್ ಸ್ಟಾರ್’ ಎಂಬ ಸ್ಪರ್ಧೆ ನಡೆಯಲಿದೆ. ಅದರ ಭಾಗವಾಗಿ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಗ್ರಾಹಕರು ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣಗಳನ್ನು ‘ಸಿಟಿ ಗೋಲ್ಡ್’ ನಲ್ಲಿ ಉಚಿತವಾಗಿ ನಿರ್ವಹಣೆ ಮಾಡಿ ಕೊಡಲಾಗುವುದು. ಅಲ್ಲದೆ ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣವನ್ನು ಬದಲಾಯಿಸಿ ಹೊಸ ವಜ್ರಾಭರಣವನ್ನು ಪಡೆದುಕೊಳ್ಳಬಹುದು. ಅದೇ ರೀತಿ ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣಗಳ ಗುಣಮಟ್ಟವನ್ನು ಇಲ್ಲಿ ಉಚಿತವಾಗಿ ಪರಿಶೀಲಿಸಬಹುದಾಗಿದೆ. ಫೆಸ್ಟಿವಲ್ ಪ್ರಯುಕ್ತ ವಜ್ರಾಭರಣವನ್ನು ತಯಾರಿಸುವ ವಿನ್ಯಾಸಕಾರರು ಸಂಸ್ಥೆಯ ಮಳಿಗೆಯಲ್ಲಿ ಲಭ್ಯರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಗ್ರಾಹಕರು ಸಿಟಿ ಗೋಲ್ಡ್ ಮಳಿಗೆಗೆ ಆಗಮಿಸಿ ವಜ್ರಾಭರಣವನ್ನು ಧರಿಸಿ ಸೆಲ್ಫಿ ತೆಗೆದು ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಅಥವಾ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿ ಸಿಟಿ ಗೋಲ್ಡ್ ಇನ್‌ಸ್ಟಾಗ್ರಾಮ್ ಐಡಿಗೆ ಟ್ಯಾಗ್ ಮಾಡಬಹುದು. ಯಾವ ಗ್ರಾಹಕರಿಗೆ ಹೆಚ್ಚು ಲೈಕ್ ಸಿಗುತ್ತದೆಯೋ ಅಂತಹವರಿಗೆ ಸಿಟಿ ಗೋಲ್ಡ್ ವತಿಯಿಂದ ವಜ್ರಾಭರಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಫೆಸ್ಟಿವಲ್ ಪ್ರಯುಕ್ತ ಗ್ರಾಹಕರಿಗೆ ಖರೀದಿಯ ಮೇಲೆ ಹಲವಾರು ರಿಯಾಯಿತಿ ಸಿಗಲಿದೆ. ಡೈಮಂಡ್ ಖರೀದಿಯ ಮೇಲೆ ಪ್ರತಿಯೊಂದು ಕ್ಯಾರೆಟ್‌ನಲ್ಲಿ 20,000 ರೂ. ವಿನಾಯಿತಿ ದೊರೆಯಲಿದೆ. ಅನ್‌ಕಟ್ ಡೈಮಂಡ್ ಮೇಲೆ ಶೇ.30 ಡಿಸೈಂಟ್ ವಿನಾಯಿತಿ ನೀಡಲಾಗುತ್ತದೆ.