Sunday, June 8, 2025

ಬೀಟಿಂಗ್ ರಿಟ್ರೀಟ್ ಸಮಾರೋಪ ಸಮಾರಂಭದಲ್ಲಿ ಭಾರತ ಸೃಷ್ಟಿಸಲಿದೆ ಹೊಸ ದಾಖಲೆ..!

ನವದೆಹಲಿ :ದೇಶದಲ್ಲಿ 73ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಜನವರಿ 29ರಂದು ತೆರೆಬೀಳಲಿದೆ. ಬೀಟಿಂಗ್ ರಿಟ್ರೀಟ್ ಸಮಾರೋಪ ಸಮಾರಂಭದ ಮೂಲಕ ಗಣರಾಜ್ಯೋತ್ಸವ ಸಂಭ್ರಮ ಮುಕ್ತಾಯಗೊಳ್ಳಲಿದೆ. ಈ ಸಂದರ್ಭ ಇದೇ ಮೊದಲ ಬಾರಿಗೆ ಭಾರತೀಯ ಸ್ಟಾರ್ಟ್ಅಪ್ ಬೋಟ್ಲಾಬ್‌ನ 1,000 ಡ್ರೋನ್ ಆಕಾಶದಲ್ಲಿ ಹಾರಾಟ ನಡೆಸಲಿದೆ.


ಬೀಟಿಂಗ್ ರಿಟ್ರೀಟ್‌ನಲ್ಲಿ 10 ನಿಮಿಷಗಳ ಕಾಲ ಡ್ರೋನ್ ಹಾರಾಟ ನಡೆಸಲಿದ್ದು, ಈ ವೇಳೆ ಆಗಸದಲ್ಲಿ ಸರ್ಕಾರದ 75 ಸಾಧನೆಯನ್ನು ಡ್ರೋನ್ ಮೂಲಕ ತೋರಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ರೀತಿಯ ಸಾಹಸವನ್ನು ಪ್ರದರ್ಶಿಸಲಾಗುತ್ತಿದೆ. ಈ ಮೊದಲು ಚೀನಾ, ಅಮೇರಿಕ ಹಾಗೂ ರಷ್ಯಾ 1000 ಡ್ರೋನ್‌ಗಳ ಹಾರಾಟ ನಡೆಸಿತ್ತು, ಇದೀಗ ಈ ರೀತಿಯ ಸಾಹಸ ಪ್ರದರ್ಶನ ಮಾಡುತ್ತಿರುವ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.


ಇನ್ನು, 1,000 ಡ್ರೋನ್ ಅಭಿವೃದ್ಧಿ ಪಡಿಸಲು ಬೋಟ್ಲಾಬ್ ಡೈನಾಮಿಕ್ಸ್ ಕಂಪೆನಿ 6 ತಿಂಗಳು ಸಮಯವಕಾಶವನ್ನು ಪಡೆದುಕೊಂಡಿತ್ತು. ಈ ಡ್ರೋನ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದ್ದು, ಸಾಫ್ಟ್ ವೇರ್, ಹಾರ್ಡ್ ವೇರ್, ಜಿಪಿಎಸ್ ಸೇರಿದಂತೆ ತಂತ್ರಜ್ಞಾನದಲ್ಲಿ ಆಧುನಿಕತೆಯನ್ನು ತರಲಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles