ಮುಂಬೈ: ಅಫ್ಘಾನಿಸ್ತಾನದ ಯುವ ಆಟಗಾರ ಲೆಗ್ ಸ್ಪಿನ್ನರ್ ಇಝಾರುಲ್ಹಕ್ ನವೀದ್ ಅವರು ಆರ್‌ಸಿಬಿ ತಂಡವನ್ನು ಸೇರಿದ್ದಾರೆ.
18 ವರ್ಷದ ಇಝಾರುಲ್ಹಕ್ ನವೀದ್ ಅವರು ಇದುವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಇದೀಗ ಅವರನ್ನು ಆರ್‌ಸಿಬಿ ತಂಡದ ನೆಟ್ ಬೌಲರ್ ಆಯ್ಕೆ ಮಾಡಲಾಗಿದೆ. ಈ ಕುರಿತಂತೆ ಇಝಾರುಲ್ಹಕ್ ನವೀದ್ ಆರ್‌ಸಿಬಿ ಜೆರ್ಸಿ ಧರಿಸಿದ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
2022ರ ಪ್ರಾರಂಭದಲ್ಲಿ ನಡೆದ ಐಸಿಸಿ ಅಂಡರ್ – 19 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಇಝಾರುಲ್ಹಕ್ ನವೀದ್ ಆಡಿದ್ದರು. ಅವರು ಆಡಿದ 6 ಪಂದ್ಯಗಳಲ್ಲಿ 4 ವಿಕೆಟ್ ಪಡೆದುಕೊಂಡಿದ್ದಾರೆ. 3.63 ಎಕಾನಮಿಯಲ್ಲಿ ವಿಕೆಟ್ ಪಡೆದಿರುವುದು ವಿಶೇಷ.
ಈ ಬಾರಿಯ ನೆಟ್ ಬೌಲರ್ ಆಗಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸಿಸ್ ರಂತಹ ಬ್ಯಾಟರ್ಗಳಿಗೆ ಬೌಲಿಂಗ್ ಮಾಡಲಿದ್ದಾರೆ. ನೆಟ್ ಬೌಲರ್ ಆಗಿ ಇಝಾರುಲ್ಹಕ್ ನವೀದ್ ಉತ್ತಮ ಪ್ರದರ್ಶನ ನೀಡಿದರೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಹರಾಜಾಗುವುದು ಖಂಡಿತ.