Sunday, June 8, 2025

ಐಪಿಎಲ್ 2022: ಬಿಕರಿಯಾಗದೆ ಉಳಿದ ಸ್ಟಾರ್ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಹರಾಜು ಪ್ರಕ್ರಿಯೆಯು ಮುಗಿದಿದ್ದು, ಕೆಲ ಸ್ಟಾರ್ ಆಟಗಾರರು ಮಾರಾಟವಾಗದೇ ಐಪಿಎಲ್ 2022 ಮೆಗಾ ಆಕ್ಷನ್ ಮುಕ್ತಾಯವಾಗಿದೆ. ಒಟ್ಟು 590 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 204 ಆಟಗಾರರು ಮಾತ್ರ ಮಾರಾಟವಾಗಿ 10 ಫ್ರಾಂಚೈಸಿ ಸೇರಿದ್ದಾರೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಮುಖ ಆಟಗಾರರು ಮಾರಾಟವಾಗದೇ ಉಳಿದಿರುವುದು ಅಚ್ಚರಿಗೆ ಕಾರಣವಾಗಿದೆ.

ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದ ಸುರೇಶ್ ರೈನಾ ಎರಡನೇ ಬಾರಿ ಕೂಡ ಬಿಕರಿಯಾಗದೇ ಉಳಿದಿದ್ದಾರೆ. ಸಿಎಸ್​ಕೆಯು ಕೂಡ ಖರೀದಿಸಲು ಮುಂದೆ ಬರದೇ ಇರುವುದು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಐಪಿಎಲ್ ಪ್ರಾರಂಭವಾದಾಗಿನಿಂದ ಸುರೇಶ್ ರೈನಾ ಅವರು ಸಿಎಸ್​ಕೆ ಪರವಾಗಿ ಆಡುತ್ತಿದ್ದು, ಹಿಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ಮತ್ತೆ ತಂಡಕ್ಕೆ ತೆಗೆದುಕೊಳ್ಳುವ ಮನಸ್ಸನ್ನು ಸಿಎಸ್‌ಕೆ ಫ್ರಾಂಚೈಸಿ ಮಾಡಿಲ್ಲ.

ಡೇವಿಡ್​ ಮಲನ್​, ಇಯಾನ್ ಮಾರ್ಗನ್​, ಆ್ಯರೋನ್ ಫಿಂಚ್, ಸ್ಟೀವ್ ಸ್ಮಿತ್, ಡೇವಿಡ್ ಮಿಲ್ಲರ್, ಶಕೀಬ್ ಅಲ್ ಹಸನ್, ಮೊಹಮ್ಮದ್ ನಬಿ, ವದ್ಧೀಮಾನ್ ಸಾಹಾ, ಅಮಿತ್ ಮಿಶ್ರಾ, ಆಡಂ ಜಂಪಾ, ಇಮ್ರಾನ್ ತಾಹೀರ್, ಉಸ್ಮಾನ್ ಖ್ವಾಜಾ, ಕೇದಾರ್ ಜಾಧವ್, ಮಾರ್ಟಿನ್ ಗಪ್ಟಿಲ್, ಕಾರ್ಲೊಸ್ ಬ್ರೇಥ್‌ವೇಟ್, ಚೇತೇಶ್ವರ್ ಪೂಜಾರ, ಮುರಳಿ ವಿಜಯ್, ಮಾರ್ನಸ್ ಲಾಬುಶೇನ್, ಇಶಾನ್ ಶರ್ಮಾ, ಶೆಲ್ಡನ್ ಕಾಟ್ರೆಲ್, ಆಂಡ್ರೊ ಟೈ, ಬೆನ್ ಕಟ್ಟಿಂಗ್, ಕೇನ್ ರಿಚರ್ಡಸನ್, ಪವನ್ ಮುಂತಾದ ಆಟಗಾಗರು ಬಿಕರಿಯಾಗದೇ ಉಳಿದಿರುವ ಪ್ರಮುಖ ಆಟಗಾರರಾಗಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles